September 20, 2024

ಮುನ್ಸೂಚಿಸದೆ ಜಮಾಯಿಸಿ, ಗಲಭೆಗೆ ಯತ್ನಿಸಿದ ಭಜರಂಗದಳ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ಯಾಕಿಲ್ಲ? ಎಸ್ ಡಿ ಪಿ ಐ ಪ್ರಶ್ನೆ

0

ಬಂಟ್ವಾಳ: ದುರುದ್ದೇಶಪೂರಿತ ಸಂಚನ್ನು ಹೂಡಿ ಪೊಲೀಸ್ ಇಲಾಖೆಗೆ ಯಾವುದೇ ಅನಮತಿ, ಮುನ್ಸೂಚನೆ ನೀಡದೆ ಬಿ.ಸಿ ರೋಡ್ ಪೇಟೆ ಬಳಿ ಜಮಾಯಿಸಿ, ಗಲಭೆಗೆ ಯತ್ನಿಸಿದ ಭಜರಂಗದಳ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ಯಾಕೆ ಕೈಗೊಳ್ಳಲಿಲ್ಲ? ಎಂದು SDPI ಬಂಟ್ವಾಳ ವಿಧಾನಸಭಾ ಕ್ಷೇತ್ರಾಧ್ಯಕ್ಷ ಶಾಹುಲ್ ಎಸ್ ಎಚ್ ಸರಕಾರ ಮತ್ತು ಪೊಲೀಸರಿಗೆ ಪ್ರಶ್ನಿಸಿದ್ದಾರೆ.

‘ಪದೇ ಪದೇ ದ.ಕ ಜಿಲ್ಲೆಯ ಶಾಂತಿಯನ್ನು ಹದಗೆಡುವ ಭಜರಂಗದಳ ಯಾಕೆ ಸರಕಾರಕ್ಕೆ ಕಂಟಕವಾಗಿ ಕಾಣುತ್ತಿಲ್ಲ? ಇಂದು ಅವರು ಕೇವಲ ಜಮಾಯಿಸಿದ್ದು ಮಾತ್ರವಲ್ಲದೆ ಬಹಿರಂಗ ಬೆದರಿಕೆಗಳು, ಪೊಲೀಸರೊಂದಿಗೆ ನೂಕು ನುಗ್ಗಲು, ಅವಾಚ್ಯ ಶಬ್ದಗಳ ನಿಂದನೆಗಳಂತಹ ಕುಕೃತ್ಯಗಳು ಮಾಡಿದ್ದಾರೆ. ಯಾಕೆ ಸರಕಾರ ಕಣ್ಣಿದ್ದೂ ಕುರುಡರಂತೆ ವರ್ತಸುತ್ತಿದೆ?’ ಎಂದೂ ಪ್ರಶ್ನಿಸಿದ್ದಾರೆ.

‘SP, DYSP ಗಳಂತಹ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಬ್ಯಾರಿಕೇಡ್ ತೆರವು, ರಸ್ತೆ ಬಂದ್, ಅವಾಚ್ಯ ನಿಂದನೆಗಳು, ಅಮಾಯಕ ದಾರಿಹೋಕರಿಗೆ ಉಪಟಳದಂತಹ ಕೃತ್ಯಗಳು ಎಸೆಯುವಾಗ ಪೊಲೀಸರ ಮೌನ ನಿಜಕ್ಕೂ ಅಸಮಾಧಾನ ತಂದಿದೆ’ ಎಂದು ಅವರು ಹೇಳಿದ್ದಾರೆ.

‘ಶರಣ್ ಪಂಪ್ವೆಲ್ ನ ಬಹಿರಂಗ ಬೆದರಿಕೆ ಹೇಳಿಕೆಗಳು, ದಾಳಿ ಮಾತುಗಳು ತಾಂಡವವಾಡುತ್ತಿರುವಾಗ ಸರಕಾರಕ್ಕೆ ಆತ ಆರೋಪಿಯಾಗಿ ಕಂಡಿಲ್ಲ. ಆತನನ್ನು ಬಂಧಿಸಲೂ ಸಾಧ್ಯವಾಗಿಲ್ಲ. ಹೊರತು ಅದಕ್ಕೆ ಪ್ರತ್ಯುತ್ತರ ನೀಡಿದ ತನ್ನದೇ ಪಕ್ಷದ ಕಾರ್ಯಕರ್ತ ಸರಕಾರಕ್ಕೆ ಆರೋಪಿಯಾಗಿ ಕಂಡದ್ದು ಅಂಜಿಕೆಗೆ ನಿದರ್ಶನ’ ಎಂದಿದ್ದಾರೆ.

ಇಂದಿನ ಪ್ರತಿಭಟನೆ, ಜನಜಂಗುಳಿಯನ್ನು ನಿಗ್ರಹಿಸುವಲ್ಲಿ ಸ್ಥಳೀಯ ಪೊಲೀಸರಿಗಿದ್ದಷ್ಟು ಆಸಕ್ತಿ ದ.ಕ ಜಿಲ್ಲಾ ವರಿಷ್ಠಾಧಿಕಾರಿಗಿರಲಿಲ್ಲ ಎಂದು ಭಾಸವಾಗುತ್ತಿದೆ. ವರಿಷ್ಠಾಧಿಕಾರಿ ಬಯಸಿದ್ದರೆ ಈ ದುಷ್ಟರನ್ನು ಹೆಡೆಮುರಿಕಟ್ಟಬಹುದಿತ್ತು. ಬಿಸಿ ರೋಡ್ ನಲ್ಲಿ ಯಾವುದೇ ಗೊಂದಲ, ಭೀತಿ ಉಂಟಾಗುತ್ತಿರಲಿಲ್ಲ’ ಎಂದೂ ಅಭಿಪ್ರಾಯಟ್ಟಿದ್ದಾರೆ.

‘ಒಬ್ಬರ ಸವಾಲನ್ನು ಸ್ವೀಕರಿಸುವ ನೆಪವನ್ನು ಇಟ್ಟುಕೊಂಡು ಇಡೀ ಬಂಟ್ವಾಳ – ಬಿ.ಸಿ ರೋಡ್ ನ ಶಾಂತಿಯನ್ನ ಕದಡಲು ಹೊರಟಿರುವ ಶರಣ್ ಪಂಪ್ವೆಲ್ ಮತ್ತು ಆತನ ತಂಡವನ್ನು ಗೃಹ ಇಲಾಖೆ ನಿಗಾದಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಡೆಯುವ ಎಲ್ಲಾ ಅನಾಹುತಗಳಿಗೆ ಪೊಲೀಸ್ ಇಲಾಖೆ ಮತ್ತು ಸರಕಾರ ಕಾರಣಕರ್ತರಾಗಬಹುದು. ಕಾನೂನು ಪಾಲಕರಾದ ಪೊಲೀಸರು ತಾರತಮ್ಯ ತೋರದೆ ಸಮಾಜದ ಶಾಂತಿ ಕಾಪಾಡುವಲ್ಲಿ ಶ್ರಮಿಸಿ’ ಎಂದು ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!