March 18, 2026

ವಿಟ್ಲ ಜೆಸಿಐ ಸಪ್ತಾಹ: ಗ್ರೇಟ್ ಡೇ ಸೆಲೆಬ್ರೇಶನ್-ಡೈಮಂಡ್ ಜುಬೀಲಿ ಸೆಲೆಬ್ರೇಶನ್

0
image_editor_output_image-718225813-1726468922140

ಜೆಸಿಐ ವಿಟ್ಲದ ಜೆಸಿಐ ಸಪ್ತಾಹ 2024ರ ಕೊನೆ ದಿನ ಗ್ರೇಟ್ ಡೇ ಸೆಲೆಬ್ರೇಶನ್ ಮತ್ತು ಡೈಮಂಡ್ ಜುಬಿಲೀ ಸೆಲೆಬ್ರೇಶನ್, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಜೆಸಿ. ಪೂರ್ವ ಅಧ್ಯಕ್ಷರು, ರೋಟರಿ ಜಿಲ್ಲೆ 3181,ವಲಯ 4ರ ಅಸಿಸ್ಟೆಂಟ್ ಗವರ್ನರ್ ಆದ ರೋ. ಜಯರಾಮ್ ರೈ ದೀಪ ಬೆಳಗಿಸಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಜೆಸಿ ಪೂರ್ವ ಅಧ್ಯಕ್ಷರು ಆದ ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷರು ಆದ ಲಯನ್. ಪ್ರಭಾಕರ್ ಶೆಟ್ಟಿ ದಂಬೇಕನ ಹಾಗೂ ಜೆಸಿ ಪೂರ್ವ ಅಧ್ಯಕ್ಷರು ಆದ ಬಂಟ್ವಾಳ ತಾಲೂಕು ಜಮೀಯತ್ ಫಲಹಾ ಅಧ್ಯಕ್ಷರು, ಎಮ್ ಫ್ರೆಂಡ್ಸ್ ಸ್ಥಾಪಕ ಅಧ್ಯಕ್ಷರು ಆದ ಜೆಸಿ. ರಶೀದ್ ವಿಟ್ಲ ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ಜೆಸಿ. ಸಂತೋಷ್ ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮೂವರು ಹಿರಿಯ ಮಹಿಳಾ ಸೇವಕಿಯಾರಾದ ಭವಾನಿ ಟೀಚರ್ ಕೊಲ್ಯ, ಶ್ರೀಧರ್ ಪ್ರತಿಭಾ ಶೆಟ್ಟಿ ದೇವರಗುಂಡಿ ಪುಣಚ, ಲಯನ್. ಪುಷ್ಪಲತಾ ವಿಟ್ಲ ಇವರನ್ನು ಸನ್ಮಾನಿಸಲಾಯಿತು. ಜೊತೆಗೆ ಜಿಲ್ಲಾ ಪ್ರಶಸ್ತಿ ಉತ್ತಮ ಶಿಕ್ಷಕ ತಿಮ್ಮಪ ನಾಯ್ಕ್ ಇವರನ್ನು ಸನ್ಮಾನಿಸಲಾಯಿತು… ಹಾಗೂ ಜೆಸಿಐ ಶಿಕ್ಷಕರ ಶಿಕ್ಷಕರ ದಿನಾಚರಣೆ ಪ್ರಯುಕ್ತ ಗೌರವಿಸಲಾಯಿತು.. ಜೆಸಿಐ ಇಂಡಿಯಾ 75ರ ಸಂಭ್ರಮವನ್ನು ಎಲ್ಲಾ ಪೂರ್ವ ಅಧ್ಯಕ್ಷರು ಸೇರಿ ಕೇಕ್ ಕಟ್ ಮಾಡುವ ಮೂಲಕ ಆಚರಿಸಲಾಯಿತು. ವೇದಿಕೆಯಲ್ಲಿ ಜೆಸಿ. ಪರಮೇಶ್ವರ್, ಜೆಸಿ. ಆರ್ಥಿಕ್, ಜೆಸಿ ಮುರಳಿ ಪ್ರಸಾದ್, ಜೆಸಿ ಸಿಂಧು ಶೆಟ್ಟಿ, ಜೆಜೆಸಿ ಸಾನ್ವಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!