February 3, 2026

ಆಲೂಗಡ್ಡೆಯ ಬಾಕ್ಸ್ ನಲ್ಲಿ 8 ಅಡಿ ಉದ್ದದ ಹೆಬ್ಬಾವು ಪತ್ತೆ

0
image_editor_output_image-2135277931-1726131112307.jpg

ಮಹಾರಾಷ್ಟ್ರ : ಮಹಾರಾಷ್ಟ್ರದ ಚಂದ್ರಾಪುರದ ಹೋಟೆಲ್‌ವೊಂದರಲ್ಲಿ ಆಲೂಗಡ್ಡೆ ಬಾಕ್ಸ್ನಲ್ಲಿ 8 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿದೆ‌.

ಜನರಲ್ಲಿ ಆತಂಕ ಮೂಡಿಸಿದೆ. ಹೋಟೆಲ್ ಸಿಬ್ಬಂದಿಯೊಬ್ಬರು ಅಡುಗೆಗೆಂದು ಆಲೂಗಡ್ಡೆ ತೆಗೆದುಕೊಳ್ಳಲು ಹೋದಾಗ ಹೆಬ್ಬಾವು ಕಾಣಿಸಿಕೊಂಡಿದೆ. ಹಾವನ್ನು ಕಂಡ ಸಿಬ್ಬಂದಿ ಭಯದಿಂದ ಹೊರಗೆ ಓಡಿ ಬಂದಿದ್ದಾರೆ.

ಬಾಕ್ಸ್‌ನಲ್ಲಿ ಹಾವು ಇದೆ ಎಂಬ ಸುದ್ದಿ ತಿಳಿದ ಹೋಟೆಲ್‌ನಲ್ಲಿ ಗೊಂದಲ ಉಂಟಾಗಿತ್ತು. ಹೋಟೆಲ್ ಮಾಲೀಕರು ಹಾವು ಹಿಡಿಯುವವರಿಗೆ ಕರೆ ಮಾಡಿದರು.

ಕೆಲವು ದಿನಗಳ ಹಿಂದೆ, ಲಕ್ನೋದ ಪವರ್ ಹೌಸ್‌ನಲ್ಲಿ ದೈತ್ಯ ಹೆಬ್ಬಾವು ಕಾಣಿಸಿಕೊಂಡಿದ್ದು, ಜನರಲ್ಲಿ ಭಯ ಹುಟ್ಟಿಸಿತ್ತು. ಹೆಬ್ಬಾವನ್ನು ರಕ್ಷಿಸಲು ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕಾಯಿತು. ಜುಲೈನಲ್ಲಿ ಆಗ್ರಾ ಕೋಟೆ ಆವರಣದ ಶೌಚಾಲಯದಿಂದ ಆರು ಅಡಿ ಉದ್ದದ ಹಾವನ್ನು ರಕ್ಷಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!