ಉಪಹಾರದಲ್ಲಿ ತಿಂಡಿಯಲ್ಲಿ ಬ್ಲೇಡ್ ಪತ್ತೆ: ಹೊಟೇಲ್ಗೆ ಬೀಗ ಹಾಕಿದ ಅಧಿಕಾರಿಗಳು
ತಿರುವನಂತಪುರಂ: ಹೊಟೇಲ್ ಒಂದರಲ್ಲಿ ಮುಂಜಾನೆಯ ಉಪಹಾರ ಸೇವಿಸಿದ ಗ್ರಾಹಕರ ತಿಂಡಿಯಲ್ಲಿ ಬ್ಲೇಡ್ ಪತ್ತೆಯಾಗಿದೆ. ತಿರುವನಂತಪುರದ ವೆಂಪಾಲವಟ್ಟದ ಕುಮಾರ್ ಟಿಫಿನ್ ಸೆಂಟರ್ ಎಂಬ ಹೊಟೇಲ್‌ನಲ್ಲಿ ಈ ಘಟನೆ ನಡೆದಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ ಬಳಿಕ ಹೊಟೇಲ್‌ಗೆ ಬೀಗ ಜಡಿದಿದ್ದಾರೆ.
ಪಾಲೋಟ್ ಮೂಲದ ಅನೀಶ್ ಮತ್ತು ಅವರ ಪುತ್ರಿ ಸನುಷಾ ಎಂಬವರು ಮುಂಜಾನೆಯ ಉಪಹಾರಕ್ಕೆ ಕುಮಾರ್ ಟಿಫಿನ್ಸ್ ಎಂಬ ಹೊಟೇಲ್‌ಗೆ ಬಂದಿದ್ದಾರೆ. ಈ ವೇಳೆ ಇಡ್ಲಿ ವಡೆ ಆರ್ಡರ್ ಮಾಡಿದ್ದು, ತಿಂಡಿ ತಿನ್ನುವ ವೇಳೆ ಸನುಷಾ ಅವರು ತಿನ್ನುತ್ತಿದ್ದ ವಡೆಯಲ್ಲಿದ್ದ ಬ್ಲೇಡ್ ಅವರ ಬಾಯಿಗೆ ತಾಗಿದೆ.
ಇದನ್ನೂ ಓದಿ : ಹೊಸ ಅವತಾರದಲ್ಲಿ ಮತ್ತೆ ಬಂತು ಕೊರೋನಾ…!
ಅರ್ಧ ತುಂಡಾಗಿರುವ ಶೇವಿಂಗ್ ಬ್ಲೇಡ್ ಆಗಿದ್ದು, ವಡೆಯಲ್ಲಿ ನಡುವಿನಲ್ಲಿತ್ತು ಎಂದು ತಿಳಿದು ಬಂದಿದೆ. ತಕ್ಷಣ ಅನೀಶ್ ಅವರು ಈ ಬಗ್ಗೆ ದೂರು ನೀಡಿದ್ದು, ಸ್ಥಳಕ್ಕೆ ಬಂದ ಆರೋಗ್ಯ ಅಧಿಕಾರಿಗಳು ತಿಂಡಿಯನ್ನು ಪರಿಶೀಲನೆ ನಡೆಸಿದ್ದಾರೆ. ವಡೆಯ ನಡುವೆ ಬ್ಲೇಡ್ ಇರುವುದು ಸ್ಪಷ್ಟವಾದ ಹಿನ್ನೆಲೆಯಲ್ಲಿ ಹೊಟೇಲ್‌ಗೆ ಬೀಗ ಜಡಿದು ಕೇಸು ದಾಖಲಿಸಿಕೊಂಡಿದ್ದಾರೆ.