ಆಸ್ಕರ್ ಪ್ರಶಸ್ತಿ ವಿಜೇತ ಕಲಾವಿದ ಜೇಮ್ಸ್ ಎರ್ಲ್ ಜೋನ್ಸ್ ನಿಧನ
ವಾಷಿಂಗ್ಟನ್: ಅಮೆರಿಕದ ಖ್ಯಾತ ನಟ ಜೇಮ್ಸ್ ಎರ್ಲ್ ಜೋನ್ಸ್(93) ವಿಧಿವಶರಾಗಿದ್ದಾರೆ. ದೀರ್ಘಕಾಲದ ಮಧುಮೇಹದಿಂದ ಜೋನ್ಸ್ ಬಳಲುತ್ತಿದ್ದರು. ಸೋಮವಾರ(ಸೆ.9) ರಾತ್ರಿ ಇಹಲೋಕ ತ್ಯಜಿಸಿದ್ದಾರೆ ಎಂದು ವರದಿಯಾಗಿದೆ.
ಜೋನ್ಸ್ ನಿಧನದ ಕುರಿತು ಅವರ ಮಗ ಹ್ಯಾಮಿಲ್ ಎಕ್ಸ್ ನಲ್ಲಿ ಎಂದು ಹೃದಯ ಒಡೆದಿರುವ ಎಮೋಜಿ ಪೋಸ್ಟ್ ಮಾಡಿದ್ದಾರೆ.
ಆಸ್ಕರ್ ಪ್ರಶಸ್ತಿ ವಿಜೇತ ಕಲಾವಿದ : ಜೇಮ್ಸ್ ಎರ್ಲ್ ಜೋನ್ಸ್ ಅವರು ‘ದಿ ಲಯನ್ ಕಿಂಗ್’, ‘ಸ್ಟಾರ್ ವಾರ್ಸ್’ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಟಿವಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. ಜೊತೆಗೆ ರಂಗಭೂಮಿ ಕಲಾವಿದನಾಗಿಯೂ ಖ್ಯಾತಿ ಗಳಿಸಿದ್ದರು.