ವಸತಿ ಶಾಲೆಯಲ್ಲಿ ಭಾರೀ ಅಗ್ನಿ ಅವಘಡ: 17 ಮಕ್ಕಳು ಸಾವು, 14 ಮಕ್ಕಳು ಗಂಭೀರ
ಕೀನ್ಯಾದ ವಸತಿ ಶಾಲೆಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, 17 ಮಕ್ಕಳು ಸಾವನ್ನಪ್ಪಿದ್ದು, 14 ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಕುರಿತು ವರದಿಯಾಗಿದೆ.
ಹಿಲ್‌ಸೈಡ್ ಎಂದರಶಾ ಪ್ರಾಥಮಿಕ ಶಾಲೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ಘಟನೆಯು ದೇಶಾದ್ಯಂತ ಬೋರ್ಡಿಂಗ್ ಶಾಲೆಗಳಲ್ಲಿ ಸುರಕ್ಷತಾ ಮಾನದಂಡಗಳ ಚಿಂತೆ ಮೂಡಿದೆ. ಕೀನ್ಯಾ ರೆಡ್‌ಕ್ರಾಸ್ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೀಡಿತ ಕುಟುಂಬಗಳಿಗೆ ಮಾನಸಿಕ ಸಾಮಾಜಿಕ ಬೆಂಬಲ ಸೇವೆಗಳನ್ನು ಒದಗಿಸುತ್ತಿದೆ ಮತ್ತು ಶಾಲೆಯಲ್ಲಿ ಟ್ರೇಸಿಂಗ್ ಡೆಸ್ಕ್ ಅನ್ನು ಸ್ಥಾಪಿಸಿದೆ ಎಂದು ಬಿಬಿಸಿ ತಿಳಿಸಿದೆ.





