ಕಾಂಕ್ರಿಟ್ ಲಾರಿ ಹರಿದು ಪೊಲೀಸ್ ಸಿಬ್ಬಂದಿ ಸಾವು
ಗದಗ: ಕಾಂಕ್ರಿಟ್ ಲಾರಿ ಹರಿದು ಗಣೇಶ ಹಬ್ಬಕ್ಕೆ ಪೂಜಾ ಸಾಮಗ್ರಿ ಖರೀದಿಸಿ ಮನೆಗೆ ಹೊರಟಿದ್ದ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ ಘಟನೆ ಶುಕ್ರವಾರ ಗದಗ ನಗರದ ಭೂಮರೆಡ್ಡಿ ಸರ್ಕಲ್ ಬಳಿ ನಡೆದಿದೆ.
ಗಜೇಂದ್ರಗಡ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ರಮೇಶ್ ಡಂಬಳ (45) ಸಾವನ್ನಪ್ಪಿದ್ದಾರೆ.
ರಮೇಶ್ ಅವರು ಮಾರ್ಕೆಟ್ ನಿಂದ ಹಣ್ಣು, ತರಕಾರಿ, ಪೂಜಾ ಸಾಮಗ್ರಿ ಖರೀದಿಸಿ ಮನೆಗೆ ಹೊರಟಿದ್ದರು. ಈ ವೇಳೆ ಕಾಂಕ್ರಿಟ್ ಲಾರಿಯು ಮಾರ್ಕೆಟ್ ಏರಿಯಾದಿಂದ ಎಪಿಎಂಸಿ ಬಳಿ ಹೊರಟಿದ್ದರು. ಕಾಂಕ್ರಿಟ್ ಲಾರಿ ಓವರ್ ಟೆಕ್ ಮಾಡಿ ಹೋಗುವಾಗ ಅಪಘಾತ ನಡೆದಿದೆ. ಲಾರಿಯ ಚಕ್ರ ತಲೆಯ ಮೇಲೆ ಹರಿದು ರಮೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಮೇಶ್ ಅವರು ನೈಟ್ ಡ್ಯೂಟಿ ಮುಗಿಸಿ ಹಬ್ಬದ ಖರೀದಿಗೆ ಮಾರ್ಕೆಟ್ ಗೆ ಬಂದಿದ್ದರು.





