ವಿಟ್ಲ: ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ: ವಿಟ್ಲ ವಿಟ್ಲ ಸರ್ಕಾರಿ ಪ್ರೌಢ ಶಾಲೆ ಪ್ರಾಥಮಿಕ ವಿಭಾಗ(RMSA) ಶಾಲೆ ಎರಡು ವಿಭಾಗದಲ್ಲಿ ಪ್ರಥಮ
ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಬಂಟ್ವಾಳ, ವಿಟ್ಲ ಸರ್ಕಾರಿ ಪ್ರೌಢಶಾಲೆಯ ಆಶ್ರಯದಲ್ಲಿ ತಾಲೂಕು ಮಟ್ಟದ ಪ್ರಾಥಮಿಕ ವಿಭಾಗ ಬಾಲಕ- ಬಾಲಕಿಯರ ಕಬಡ್ಡಿ ಪಂದ್ಯಾಟ ೨೦೨೪-೨೫ ವಿಟ್ಲದಲ್ಲಿ ನಡೆಯಿತು.
ಪಂದ್ಯಾಟವನ್ನು ಉದ್ಯಮಿ ಸುಭಾಶ್ಚಂದ್ರ ನಾಯಕ್ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ರಾಷ್ಟ್ರ ಮಟ್ಟದ ಕಬಡ್ಡಿ ಸಾಧಕಿಯರಾದ ಸೌಜನ್ಯ, ಅನುಶ್ರೀ, ಕೀರ್ತಿ ಹಾಗೂ ಕ್ರೀಡಾ ಪ್ರತಿಭೆಗಳಾದ ದಿಲೀಪ್, ಕೌಶಿಕ್ ಅವರನ್ನು ಸನ್ಮಾನಿಸಲಾಯಿತು. ಎನ್ ಎಂ ಎಂ ಎಸ್ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಫಲಿತಾಂಶ:
ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ವಿಟ್ಲ ಸರ್ಕಾರಿ ಪ್ರೌಢ ಶಾಲೆ ಪ್ರಾಥಮಿಕ ವಿಭಾಗ(ಆರ್‌ಎಂಎಸ್‌ಎ) ಪ್ರಥಮ ಸ್ಥಾನ ಪಡೆದಿದೆ. ಪುಣ್ಯಕೋಟಿ ಸ್ಕೂಲ್ ಕೈರಂಗಳ ಮತ್ತು ನಾರಾಯಣ ಗುರು ಸ್ಕೂಲ್ ಪುಂಜಾಲಕಟ್ಟೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು, ಉಪಾಧ್ಯಕ್ಷೆ ಸಂಗೀತಾ ಪಾಣೆಮಜಲು, ಸದಸ್ಯರಾದ ರವಿಪ್ರಕಾಶ್ , ಸುನೀತಾ ಕೊಟ್ಯಾನ್, ಗೋಪಿಕೃಷ್ಣ, ಉದ್ಯಮಿಗಳಾದ ಬಾಬು ಕೆ. ವಿ., ಮಹಮ್ಮದ್ ರಫೀಕ್, ಬಂಟ್ವಾಳ ಕಬಡ್ಡಿ ಅಸೋಸಿಯೇಶನ್ ಉಪಾಧ್ಯಕ್ಷ ರಮಾನಾಥ ವಿಟ್ಲ, ತುಳಸೀದಾಸ್ ಶೆಣೈ, ರಾಜಶೇಖರ ವಿಟ್ಲ, ಶಿವಪ್ರಸಾದ್ ಶೆಟ್ಟಿ, ರಾಜೇಂದ್ರ ರೈ, ಸುರೇಶ್ ಶೆಟ್ಟಿ, ಅಖಿಲ್ ಶೆಟ್ಟಿ, ಪ್ರಾಥಮಿಕ ಹಾಗೂ ಪ್ರೌಢ ಶಾಲಾಭಿವೃದ್ಧಿ ಸಮಿಯ ಅಧ್ಯಕ್ಷರಾದ ರವಿಶಂಕರ, ರಶ್ಮಿ,ಮಂಜುನಾಥ ನಾಯಕ್, ಸದಾಶಿವ ನಾಯಕ್, ಶಿಕ್ಷಣ ಇಲಾಖೆಯ ಬಿಂದು, ಇಂದುಶೇಖರ ರೈ ಉಪಸ್ಥಿತರಿದ್ದರು. ದೈಹಿಕ ಶಿಕ್ಷಕರಾದ ವಿದ್ಯಾಶಂಕರ್, ರಾಜೇಶ್, ಶ್ರೀನಿವಾಸ್ ಗೌಡ ವಿಟ್ಲ, ವಿಶ್ವನಾಥ ಅಳಿಕೆ, ಅರವಿಂದ ಕೇಪು, ಶಿವಪ್ರಸಾದ್, ದೀಪಕ್ ಅಳಿಕೆ, ಶ್ವೇತಾ ಸಹಕರಿಸಿದರು.
ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸ್ವಾಗತಿಸಿದರು. ಬಂಟ್ವಾಳ ಪ್ರಭಾರ ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಪ್ರಸಾದ್ ರೈ ಪ್ರಸ್ತಾವನೆಗೈದರು. ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಾಜೇಶ್ ವಂದಿಸಿದರು. ಸಹಶಿಕ್ಷಕಿ ಅರುಣಾ ಕಾರ್ಯಕ್ರಮ ನಿರೂಪಿಸಿದರು.
,,,,,,,,,





