ಉಡುಪಿ: ಆನ್ಲೈನ್ ಮೂಲಕ 1.56 ಲಕ್ಷ ರೂ. ವಂಚನೆ: ಆರೋಪಿಯ ಬಂಧನ
ಉಡುಪಿ: ಬೆಳ್ಮಣ್ ನಿವಾಸಿಯಾಗಿರುವ ವಿದೇಶದಲ್ಲಿ ಉದ್ಯೋಗದಲ್ಲಿರುವ ಪ್ರಶಾಂತ್ ಎಂಬವರ ಖಾತೆಯಿಂದ ಆನ್ಲೈನ್ ಮೂಲಕ ಹಣವನ್ನು ವರ್ಗಾವಣೆ ಮಾಡಿಕೊಂಡು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಸೆನ್ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿ ಆತನಿಂದ 1,56,000 ರೂ ಹಣವನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
ವಿದೇಶದಲ್ಲಿ ಉದ್ಯೋಗದಲ್ಲಿರುವ ಪ್ರಶಾಂತ್ ಶೆಟ್ಟಿ ಎಂಬವರು ಯೂನಿಯನ್ ಬ್ಯಾಂಕ್‌ನಲ್ಲಿಎರಡು ಖಾತೆಗಳನ್ನು ಹೊಂದಿದ್ದು, ಯಾರೋ ಅಪರಿಚಿತರು ಆನ್‌ಲೈನ್ ಪೇಟಿಎಮ್ ಮೂಲಕ ಎರಡೂ ಖಾತೆಯಿಂದ 1,56,000 ರೂಪಾಯಿ ಹಣವನ್ನು ಫೆ.10ರಿಂದ 20ರ ಮಧ್ಯಾವಧಿಯಲ್ಲಿ ಹಂತ ಹಂತವಾಗಿ ಇವರ ಗಮನಕ್ಕೇ ಬಾರದೆ ವರ್ಗಾಯಿಸಿಕೊಂಡಿದ್ದರು.





