ಕೆರೆಯಲ್ಲಿ ಪತ್ರಕರ್ತೆ ಸಾರಾ ಮೃತದೇಹ ಪತ್ತೆ
ಢಾಕಾ: ಬಾಂಗ್ಲಾದೇಶದ ಪತ್ರಕರ್ತೆ ಸಾರಾ ರೆಹನುಮಾ ಅವರು ಶವವಾಗಿ ಕೆರೆಯಲ್ಲಿ ಪತ್ತೆಯಾಗಿದ್ದಾರೆ. ಸಾರಾಳ ಮೃತದೇಹ ಬುಧವಾರ ಢಾಕಾದ ಹತಿರ್ಜೀಲ್ ಕೆರೆಯಲ್ಲಿ ಪತ್ತೆಯಾಗಿದೆ.
33 ವರ್ಷದ ಸಾರಾ ಬಂಗಾಳಿ ಭಾಷೆಯ ಸುದ್ದಿವಾಹಿನಿಯ ನ್ಯೂಸ್‍ರೂಂ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಸಾಯುವ ಮೊದಲು ಸಾರಾ ತನ್ನ ಫೇಸ್‍ಬುಕ್ ಪ್ರೊಫೈಲ್‍ನಲ್ಲಿ ಎರಡು ನಿಗೂಢ ಪೋಸ್ಟ್ ಮಾಡಿದ್ದರು.
ಮಂಗಳವಾರ ರಾತ್ರಿ 10:24ಕ್ಕೆ ಮಾಡಿದ ಮೊದಲ ಪೋಸ್ಟ್ ನಲ್ಲಿ ` ಸಾವಿಗೆ ಅನುಗುಣವಾದ ಜೀವನವನ್ನು ನಡೆಸುವುದಕ್ಕಿಂತ ಸಾಯುವುದು ಉತ್ತಮ’ ಎಂದು ಬರೆದಿದ್ದರು. ರಾತ್ರಿ 10:36ಕ್ಕೆ ಮಾಡಿದ್ದ ಎರಡನೇ ಪೋಸ್ಟ್ ನಲ್ಲಿ ಫಹೀಮ್ ಫೈಸಲ್ ಎಂಬವರನ್ನು ಕುರಿತು ` ನಿಮ್ಮಂತಹ ಸ್ನೇಹಿತನನ್ನು ಹೊಂದಲು ಸಂತೋಷವಾಗಿದೆ. ದೇವರು ನಿಮ್ಮನ್ನು ಯಾವಾಗಲೂ ಆಶೀರ್ವದಿಸುತ್ತಾನೆ.
ನಾವು ಒಟ್ಟಿಗೆ ಸಾಕಷ್ಟು ಯೋಜನೆಗಳ ಕನಸು ಕಂಡಿದ್ದೆವು. ಕ್ಷಮಿಸಿ ನಮ್ಮ ಯೋಜನೆಗಳನ್ನು ಪೂರೈಸಲು ಆಗಲಿಲ್ಲ. ದೇವರು ನಿಮ್ಮನ್ನು ಆಶೀರ್ವದಿಸಲಿ’ ಎಂದು ಬರೆದಿದ್ದಾರೆ. ತಾವಿಬ್ಬರೂ ವಿಚ್ಛೇದನ ಪಡೆಯುವ ಬಗ್ಗೆ ಯೋಚಿಸಿದ್ದೆವು ಎಂದು ಸಾರಾ ಅವರ ಪತಿ ಹೇಳಿರುವುದಾಗಿ ವರದಿಯಾಗಿದೆ.