ಫುಟ್‌ಬಾಲ್ ಆಡುವಾಗ ತೀವ್ರ ಎದೆನೋವು: “ಮಂಜುಮ್ಮೆಲ್ ಬಾಯ್ಸ್” ಸಿನಿಮಾದ ಸಹಾಯಕ ನಿರ್ದೇಶಕ ಮೃತ್ಯು
ಕೇರಳ: ಮಾಲಿವುಡ್‌ನಲ್ಲಿ ಸಂಚಲನ ಮೂಡಿಸಿದ ‘ಮಂಜುಮ್ಮೆಲ್ ಬಾಯ್ಸ್’ಸಿನಿಮಾದ ಸಹಾಯಕ ನಿರ್ದೇಶಕ ಅನಿಲ್ ಕ್ಸೇವಿಯರ್ ಆ.27ರಂದು ನಿಧನರಾಗಿದ್ದಾರೆ. 39ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ.
ಅಂಗಮಾಲಿಯಲ್ಲಿ ಫುಟ್‌ಬಾಲ್ ಆಡುವಾಗ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಆ ಕೂಡಲೇ ಅನಿಲ್‌ರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ನಿನ್ನೆ (ಆ.27) ರಾತ್ರಿ ಅವರು ವಿಧಿವಶರಾಗಿದ್ದಾರೆ. ಕಾರ್ಡಿಯಾಕ್ ಅರೆಸ್ಟ್‌ನಿಂದ ಮೃತಪಟ್ಟಿರೋದಾಗಿ ವೈದ್ಯರು ತಿಳಿಸಿದ್ದಾರೆ.




