February 3, 2026

ಸಾಮಾಜಿಕ ಜಾಲ ತಾಣಗಳಲ್ಲಿ SDPI ವಿರುದ್ಧ ಅಪಪ್ರಚಾರ: BJP ರಾಜ್ಯಾಧ್ಯಕ್ಷನ ವಿರುದ್ಧ SDPI ಪೊಲೀಸ್ ದೂರು

0
image_editor_output_image-1207185026-1724827732362.jpg

ಬಂಟ್ವಾಳ: ದ.ಕ ಜಿಲ್ಲೆಯ ಬಂಟ್ವಾಳ ಪುರಸಭೆಯ ಎರಡನೇ ಅವಧಿಗೆ ನಡೆದ ಅಧ್ಯಕ್ಷ, ಉಪಾಧ್ಯಕ್ಷ‌ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎಸ್ ಡಿ ಪಿ ಐ ಪಕ್ಷ ಮೈತ್ರಿ ಮಾಡಿಕೊಳ್ಳುವ ಮೂಲಕ ಅಧ್ಯಕ್ಷ ಸ್ಥಾನವು ಕಾಂಗ್ರೆಸ್ ಹಾಗೂ ಉಪಾಧ್ಯಕ್ಷ ಸ್ಥಾನವು ಎಸ್ ಡಿ ಪಿ ಐ ಪಾಲಾಗಿರುತ್ತದೆ. ಈ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದು ಇದರಿಂದ ತೀವ್ರ ಮುಖಭಂಗಕ್ಕೆ ಈಡಾಗಿ ಎಸ್ ಡಿ ಪಿ ಐ ಪಕ್ಷವು ಪಾಕಿಸ್ತಾನವನ್ನು ಬೆಂಬಲಿಸುವ ಪಕ್ಷವೆಂದು ಮತ್ತು ಉಗ್ರಗಾಮಿಗಳ ಪರ ಇರುವವರೆಂದು ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷ ವಿಜೆಯೇಂದ್ರ ಹಾಗೂ ಬಿಜೆಪಿ ಫೇಸ್ಬುಕ್ ಅಕೌಂಟ್ ಸಾಮಾಜಿಕ ಜಾಲ ತಾಣಗಳಲ್ಲಿ ಅವಹೇಳಿಸಿ, ಅಪಪ್ರಚಾರ ಮಾಡಿದ್ದು, ಈ ಮೂಲಕ ಬಂಟ್ವಾಳದಲ್ಲಿ ಹಿಂದೂ-ಮುಸಲ್ಮಾನರ ನಡುವೆ ದ್ವೇಷವನ್ನು ಉಂಟು ಮಾಡಿ ಕೋಮು ಗಲಭೆಗೆ ಪ್ರಚೋದನೆ ನೀಡಿರುತ್ತಾರೆ ಎಂದು ಆರೋಪಿಸಿ ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಶಾಹುಲ್ ಎಸ್ ಎಚ್ ಅವರ ನೇತೃತ್ವದಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ..

Leave a Reply

Your email address will not be published. Required fields are marked *

error: Content is protected !!