February 3, 2026

ಅರಳ ಮುಹಿಯದ್ದೀನ್ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ

0
image_editor_output_image99256502-1724513278684

ಮುಹಿಯದ್ದೀನ್ ಜುಮಾ ಮಸ್ಜಿದ್ ಅರಳ ಇದರ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಅರಳ ಮಸೀದಿ ವಠಾರದಲ್ಲಿ ನಡೆಯಿತು.


ಧ್ವಜಾರೋಹಣ ಕಾರ್ಯಕ್ರಮವು ಬೆಳಗ್ಗೆ 7.00 ಗಂಟೆಗೆ ಸರಿಯಾಗಿ ಅರಳ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷರಾದ ಕೆ ಎಸ್ ಅಶ್ರಫ್ ಕುಟ್ಟಿಕಲ ಇವರ ಅಧ್ಯಕ್ಷತೆಯಲ್ಲಿ ನಡೆಯಿತು .ಅರಳ ಕೇಂದ್ರ ಜುಮ್ಮಾ ಮಸೀದಿ ಖತೀಬರಾದ ಬಹು! ಸತ್ತಾರ್ ಜುಹುರಿ ಪ್ರಾಸ್ತಾವಿಕವಾಗಿ ಮಾತನಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಹೋರಾಟಗಾರರ ಶ್ರಮದ ಬಗ್ಗೆ ಅರ್ಥಪೂರ್ಣವಾಗಿ ವಿವರಿಸಿದರು.ಮುಖ್ಯ ಅತಿಥಿಗಳಾಗಿ ಸ್ಥಳೀಯ ಸದರ್ ಉಸ್ತಾದ್ ಅಬ್ದುಲ್ ಸಿದ್ದೀಕ್, ಡಿ ಅದಂ ಕುಟ್ಟಿಕಳ, ಹಾಜಿ ಅಬ್ದುಲ್ ರಜಾಕ್, ಕೆ ಎಸ್ ಖಾದರ್ ಕುಟ್ಟಿಕ್ಕಳ, ಹಾಗೂ ಕಾರ್ಯದರ್ಶಿ ಸಿದ್ದೀಕ್ ಅರಳ ಜೊತೆ ಕಾರ್ಯದರ್ಶಿಯಾದ ನವಾಜ್ ಕುಟ್ಟಿ ಕಳ ಏ ಕೆ ಹೆಲ್ಪ್ ಲೈನ್ ಇದರ ಮಾಜಿ ಅಧ್ಯಕ್ಷರಾದ ಶರಫ್ ಉಪಸ್ಥಿತರಿದ್ದರು. ಸಮದ್ ಆರಳ ಸ್ವಾಗತಿಸಿದರು.
ಏ.ಕೆ ಹೆಲ್ಪ್ ಲೈನ್ ಅರಳ ಇದರ ವತಿಯಿಂದ ಸಿದ್ಧಕಟ್ಟೆ ಹಾಗೂ ಅರಳ ವ್ಯಾಪ್ತಿಯಲ್ಲಿ ಪವರ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ! ಶಶಿಕುಮಾರ್ ಇವರ ಸೇವೆಯನ್ನು ಗುರುತಿಸಿ ಇವರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *

error: Content is protected !!