ವಾಷಿಂಗ್ಟನ್: ಕಾರು ಅಪಘಾತ, ಭಾರತೀಯ ಮೂಲದ ಒಂದೇ ಕುಟುಂಬದ ಮೂವರು ಮೃತ್ಯು

ವಾಷಿಂಗ್ಟನ್: ಭಾರತೀಯ ಮೂಲದ ಒಂದೇ ಕುಟುಂಬದ ಮೂವರು ಕಾರು ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಯುಎಸ್‌ನ ಲಾಂಪಾಸ್ ಎಂಬಲ್ಲಿ ನಡೆದಿದೆ.
ಲಿಯಾಂಡರ್ ನಿವಾಸಿಗಳಾದ ಅರವಿಂದ್ ಮನಿ (45), ಪತ್ನಿ ಪ್ರದೀಪಾ ಅರವಿಂದ್ (40) ಹಾಗೂ ಪುತ್ರಿ ಆಂಡ್ರಿಲ್ ಅರವಿಂದ್ (17) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಮುಂಬೈ ಟೆರರ್ ಅಟ್ಯಾಕ್ – ಪಾಕ್ ಮೂಲದ ರಾಣಾ ಹಸ್ತಾಂತರಕ್ಕೆ ಯುಎಸ್ ಕೋರ್ಟ್ ಅಸ್ತು
ಬುಧವಾರ ಬೆಳಿಗ್ಗೆ 5:45ರ ಸುಮಾರಿಗೆ ಯುಎಸ್‌ನ ಟೆಕ್ಸಾಸ್‌ನಲ್ಲಿ ನಡೆದ ಕಾರು ಅಪಘಾತದಲ್ಲಿ ಲಿಯಾಂಡರ್ ನಿವಾಸಿಗಳಾದ ಪತಿ ಅರವಿಂದ್ ಮನಿ, ಪತ್ನಿ ಪ್ರದೀಪಾ ಅರವಿಂದ್ ಹಾಗೂ ಪುತ್ರಿ ಆಂಡ್ರಿಲ್ ಅರವಿಂದ್ ಸಾವನ್ನಪ್ಪಿದ್ದಾರೆ. ದಂಪತಿ 14 ವರ್ಷದ ಪುತ್ರನನ್ನು ಅಗಲಿದ್ದಾರೆ.