ರೈಲಿನಡಿ ಸಿಲುಕಿ ಯುವತಿ ಮೃತ್ಯು
ಮಂಡ್ಯ : ಗೋಲ್ಡ್ ಮೆಡಲ್ ಪದವೀಧರೆ ರೈಲಿನಡಿ ಸಿಲುಕಿ ಸಾವನ್ನಪ್ಪಿದ ದಾರುಣ ಘಟನೆ ಮಂಡ್ಯ ರೈಲು ನಿಲ್ದಾಣದಲ್ಲಿ ಶನಿವಾರ ಸಂಭವಿಸಿದೆ.
ಇಲ್ಲಿನ ಸ್ವರ್ಣಸಂದ್ರ ಬಡಾವಣೆಯ ರಮ್ಯಾ (24)ಮೃತ ಯುವತಿಯಾಗಿದ್ದಾರೆ. ರೈಲು ನಿಲ್ದಾಣದ ರೈಲ್ವೆ ಮೇಲ್ಸೇತುವೆ ಬಳಿ ಹಳಿ ದಾಟುವ ವೇಳೆ ಈ ದುರ್ಘಟನೆ ಸಂಭವಿಸಿ ಹಂಪಿ ಎಕ್ಸ್‌ಪ್ರೆಸ್ ರೈಲು ಯುವತಿ ಮೇಲೆ ಹಾದು ಹೋಗಿದೆ.
ಬೆಂಗಳೂರಿನಿಂದ ಮೈಸೂರಿಗೆ ಈ ಹಂಪಿ ಎಕ್ಸ್‌ಪ್ರೆಸ್ ತೆರಳುತ್ತಿತ್ತು. ರೈಲಿಗೆ ಸಿಲುಕಿದ ರಮ್ಯಳ ದೇಹ ಛಿದ್ರಗೊಂಡಿದೆ. ಎಂಕಾಂನಲ್ಲಿ ಚಿನ್ನದ ಪದಕ ಪಡೆದಿದ್ದ ರಮ್ಯಾ ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದರು.




