ಹೆಬ್ರಿ: ತಾಲೂಕಿನ ಶಿವಪುರದ ಹಾಳ್‌ಬೆಟ್ಟು ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ವಿದ್ಯಾರ್ಥಿಯೋರ್ವ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ನೆಡೆದಿದೆ.
ಹಾಳ್‌ಬೆಟ್ಟು ನಿವಾಸಿ ಸಿದ್ವಿಕ್ ಶೆಟ್ಟಿ (16) ಮೃತಪಟ್ಟವರು. ಅವರು ಸ್ನಾನಕ್ಕೆಂದು ಹೋಗಿದ್ದಾಗ ದುರಂತ ಸಂಭವಿಸಿದೆ ಎಂದು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

