February 2, 2026

ಮಾಣಿ : ಆ.11 ರಂದು ಸ್ವಾತಂತ್ರೋತ್ಸವದ ಪ್ರಯುಕ್ತ ರಕ್ತದಾನ ಶಿಬಿರ

0
image_editor_output_image-961304914-1723281215421

ಬಂಟ್ವಾಳ : ಎಸ್ಕೆಎಸ್ಸೆಸ್ಸೆಫ್ ವಿಖಾಯ ಮಾಣಿ ವಲಯ ಇದರ ವತಿಯಿಂದ ಡಿಗ್ನಿಟಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇವುಗಳ ಸಹಕಾರದೊಂದಿಗೆ ಸ್ವಾತಂತ್ರೋತ್ಸವದ ಪ್ರಯುಕ್ತ ರಕ್ತದಾನ ಶಿಬಿರ ಆ.11 ರಂದು ಕೊಡಾಜೆ ಡಿಗ್ನಿಟಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ನಡೆಯಲಿದೆ.

        ಕೊಡಾಜೆ ಬದ್ರಿಯಾ ಜುಮಾ ಮಸೀದಿ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಪೊನ್ಮಳ ಶಿಬಿರಕ್ಕೆ ಚಾಲನೆ ನೀಡಲಿದ್ದು, ಡಿಗ್ನಿಟಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಅದ್ಯಕ್ಷ ರಫೀಕ್ ಹಾಜಿ ಸುಲ್ತಾನ್ ಉದ್ಘಾಟಿಸುವರು. ಎಸ್ಕೆಎಸ್ಸೆಸ್ಸೆಫ್ ಮಾಣಿ ವಲಯಾಧ್ಯಕ್ಷ ಇಲ್ಯಾಸ್ ನೇರಳಕಟ್ಟೆ ಅಧ್ಯಕ್ಷತೆ ವಹಿಸುವರು.

     ಎಸ್ಕೆಎಸ್ಸೆಸ್ಸೆಫ್ ವಿಖಾಯ ರಾಜ್ಯ ಸಮಿತಿ ಕಾರ್ಯಾಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಸಹಿತ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಎಸ್ಕೆಎಸ್ಸೆಸ್ಸೆಫ್ ವಿಖಾಯ ಮಾಣಿ ವಲಯ ಚೇರ್ಮನ್ ಮುಹಮ್ಮದ್ ಇಸ್ಹಾಕ್ ಕೌಸರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!