ಸೆಲ್ಫಿ ಕ್ಲಿಕ್ಕಿಸಲು ಹೋಗಿ 100 ಅಡಿ ಪ್ರಪಾತಕ್ಕೆ ಬಿದ್ದ ಯುವತಿ
ಮಹಾರಾಷ್ಟ್ರ: ಸೆಲ್ಫಿ ತೆಗೆಯಲು ಹೋದ ಯುವತಿಯೊಬ್ಬಳು 100 ಅಡಿ ಆಳಕ್ಕೆ ಬಿದ್ದು ಬುದುಕುಳಿದು ಬಂದ ಅಚ್ಚರಿ ಘಟನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಉಂಗಾರ್ ರಸ್ತೆಯಲ್ಲಿ ಇರುವಂತಹ ಬೋರ್ನ್ ಘಾಟ್‌ನಲ್ಲಿಈ ಘಟನೆ ಸಂಭವಿಸಿದೆ.
ಬೋರ್ನ್ ಘಾಟ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಲು ಮುಂದಾಗಿದ್ದಾರೆ. ಈ ವೇಳೆ ಯುವತಿ ಆಯತಪ್ಪಿ 100 ಅಡಿ ಆಳಕ್ಕೆ ಬಿದ್ದಿದ್ದಾರೆ. ಆಕೆಯನ್ನು ಸ್ಥಳೀಯರು ಹಗ್ಗದ ಮೂಲಕ ರಕ್ಷಣೆ ಮಾಡಿದ್ದಾರೆ. ಅದೃಷ್ಟವಶಾತ್ 100 ಅಡಿ ಆಳಕ್ಕೆ ಬಿದ್ದರೂ ಯುವತಿ ಬದುಕುಳಿದಿದ್ದಾರೆ. ಯುವತಿಯನ್ನು ರಕ್ಷಣೆ ಮಾಡುತ್ತಿದ್ದ ವೇಳೆ ಅಭಿ ಅಭಿ ಎಂದು ಜೋರಾಗಿ ಕೂಗಾಡಿದ್ದಾಳೆ.
ಇತ್ತೀಚೆಗೆ ಮುಂಬೈ ಮೂಲದ ಸೋಶಿಯಲ್ ಮೀಡಿಯಾ ಸ್ಟಾರ್ ಆನ್ವಿ ಕಾಮ್ದಾರ್ ಎಂಬವರು ಇನ್ಸ್ಟಾ ರೀಲ್ಸ್ ಚಿತ್ರೀಕರಿಸುವಾಗ ಕುಂಬೆ ಜಲಪಾತಕ್ಕೆ ಬಿದ್ದ ಸಾವನ್ನಪ್ಪಿದ್ದಳು. 350 ಅಡಿ ಆಳಕ್ಕೆ ಬಿದ್ದು ಕೊನೆಯುಸಿರೆಳೆದಿದ್ದಳು. ಆದರೀಗ ಇಂತಹದೇ ಸೆಲ್ಫಿ ಅವಾಂತರದಿಂದ ಜೀವ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಿತ್ತು.





