ಬಾಂಗ್ಲಾದೇಶದಲ್ಲಿ ಹಿಂಸಾಚಾರ: 72 ಮಂದಿ ಸಾವು

ಢಾಕಾ: ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನಾ ರಾಜೀನಾಮೆಗೆ ಒತ್ತಾಯಿಸಿ ವಿದ್ಯಾರ್ಥಿಗಳ ಸಂಘಟನೆಗಳು ಕರೆ ನೀಡಿರುವ ಅಸಹಕಾರ ಚಳವಳಿಯ ಮೊದಲ ದಿನ ಭಾನುವಾರ ಪ್ರತಿಭಟನಾಕಾರರು ಮತ್ತು ಆಡಳಿತಾರೂಢ ಅವಾಮಿ ಲೀಗ್ ಬೆಂಬಲಿಗರ ನಡುವಿನ ಸಂಘರ್ಷ ಹಿಂಸಾರೂಪಕ್ಕೆ ತಿರುಗಿದ್ದು, 72 ಮಂದಿ ಮೃತಪಟ್ಟಿದ್ದಾರೆ.
ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಿ ಇಂದು ಬೆಳಿಗ್ಗೆ ಪ್ರತಿಭಟನಾಕಾರರು ಅಸಹಕಾರ ಚಳವಳಿ ಆರಂಭಿಸಿದ್ದರು. ಇದಕ್ಕೆ ಆಡಳಿತಾರೂಢ ಅವಾಮಿ ಲೀಗ್, ಛತ್ರ ಲೀಗ್ ಮತ್ತು ಜುಬೊ ಲೀಗ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರಿಂದ ಸಂಘರ್ಷ ಭುಗಿಲೆದ್ದಿದೆ.
‘ಸಂಘರ್ಷದಲ್ಲಿ ಬಾಂಗ್ಲಾದೇಶದ 13 ಜಿಲ್ಲೆಗಳಲ್ಲಿ ಈವರೆಗೆ 32 ಮಂದಿ ಮೃತಪಟ್ಟಿದ್ದಾರೆ’ ಎಂದು ಪ್ರೊಥೋಮ್ ಅಲೊ ಪತ್ರಿಕೆ ವರದಿ ಮಾಡಿದೆ.