ಫ್ಲೈಓವರ್ ಮೇಲೆ ಭೀಕರ ಅಪಘಾತ: ಓರ್ವ ಸಾವು, ಇಬ್ಬರು ಗಂಭೀರ
ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಂಜುನಾಥ್ (52) ಮೃತ ದುರ್ದೈವಿ.
ಫ್ಲೈಓವರ್ ಮೇಲೆ ಕಾರೊಂದು ಬ್ರೇಕ್ ಡೌನ್ ಆಗಿ ನಿಂತಿತ್ತು. ಅದನ್ನು ಸರಿಪಡಿಸಲು ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ಹೋಗಿದ್ದರು. ಸಿಬ್ಬಂದಿ ಸತೀಶ್ ಹಾಗೂ ರಾಜಣ್ಣ ಎಂಬುವವರು ಟೋಯಿಂಗ್‌ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು.
ಈ ವೇಳೆ ಫ್ಲೈಓವರ್ ಮೇಲೆ ವೇಗವಾಗಿ ಬಂದ ಬುಲೆರೋ ಪಿಕಪ್‌ವೊಂದು ಕಾರು ದುರಸ್ತಿ ಮಾಡುತ್ತಿದ್ದವರಿಗೆ ಡಿಕ್ಕಿ ಹೊಡೆದಿದೆ.





