March 14, 2026

ವಯನಾಡು: ಪುನರ್ವಸತಿಗಾಗಿ 3 ಕೋಟಿ ರೂ. ಆರ್ಥಿಕ ನೆರವು ಪ್ರಕಟಿಸಿದ ಮೋಹನ್ ಲಾಲ್

0
image_editor_output_image174967999-1722750575512.jpg

ವಯನಾಡು: ಭಾರತೀಯ ಟೆರಿಟೋರಿಯಲ್ ಆರ್ಮಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿರುವ ಖ್ಯಾತ ನಟ ಮೋಹನ್ ಲಾಲ್ ಅವರು ಶನಿವಾರ ಭೂಕುಸಿತ ಪೀಡಿತ ವಯನಾಡ್‌ಗೆ ಆಗಮಿಸಿ ಪರಿಶೀಲನೆ ನಡೆಸಿದ್ದು, ವಿಪತ್ತು ಪೀಡಿತ ಪ್ರದೇಶದಲ್ಲಿ ಪುನರ್ವಸತಿ ಕಾರ್ಯಕ್ಕಾಗಿ ರೂ.3 ಕೋಟಿ ಆರ್ಥಿಕ ನೆರವನ್ನು ಪ್ರಕಟಿಸಿದ್ದಾರೆ.

ಸೇನಾ ಸಮವಸ್ತ್ರದಲ್ಲಿ ಮೆಪ್ಪಾಡಿಯ ಸೇನಾ ಶಿಬಿರಕ್ಕೆ ಆಗಮಿಸಿದ ನಟ, ಅಧಿಕಾರಿಗಳೊಂದಿಗೆ ಕೆಲಹೊತ್ತು ಚರ್ಚೆ ನಡೆಸಿದರು. ಬಳಿಕ ಭೂಕುಸಿತ ಪೀಡಿತ ಪ್ರದೇಶಕ್ಕೆ ತೆರಳಿದರು.

ಚೂರಲ್ಮಲಾ, ಮುಂಡಕ್ಕೈ ಮತ್ತು ಪುಂಚಿರಿಮಟ್ಟಂ ಮತ್ತಿತರ ಸ್ಥಳಗಳಿಗೆ ಭೇಟಿ ನೀಡಿದ ಅವರು, ಸೇನೆ ಮತ್ತು ಸ್ಥಳೀಯರು ಸೇರಿದಂತೆ ವಿವಿಧ ರಕ್ಷಣಾ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿ ಘಟನೆಯ ತೀವ್ರತೆಯ ಬಗ್ಗೆ ಮಾಹಿತಿ ಪಡೆದರು.

Leave a Reply

Your email address will not be published. Required fields are marked *

error: Content is protected !!