ಪ್ಯಾರಿಸ್ ಒಲಿಂಪಿಕ್ಸ್: ಫೆನ್ಸಿಂಗ್ ಗೇಮ್‌ನಲ್ಲಿ ಸೋತರೂ ಎಲ್ಲರ ಗಮನ ಸೆಳೆದ 7 ತಿಂಗಳ ಗರ್ಭಿಣಿ ನದಾ ಹಫಿಝ್
ಪ್ಯಾರಿಸ್: ಒಲಿಂಪಿಕ್‌ನ ನಾಲ್ಕನೇ ದಿನವಾದ ಇಂದು ಭಾರತ ಸೇರಿದಂತೆ ವಿಶ್ವದಾದ್ಯಂತ ಆಟಗಾರರು ಪದಕಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಇದರ ನಡುವೆಯೇ 7 ತಿಂಗಳ ಗರ್ಭಿಣಿಯೊಬ್ಬರು ಫೆನ್ಸಿಂಗ್ ಗೇಮ್‌ನಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಈಜಿಪ್ಟ್ನ ಫೆನ್ಸರ್ ನದಾ ಹಫೀಜ್ ಅವರು ಫೆನ್ಸಿಂಗ್‌ನ ಮಹಿಳಾ ಸೇಬರ್ ವೈಯಕ್ತಿಕ ಸ್ಪರ್ಧೆಯಲ್ಲಿ ಭಾಗವಹಿಸಿ 16ನೇ ಸುತ್ತಿನಲ್ಲಿ ಸೋಲನುಭವಿಸಿ ಹೊರ ಬಿದ್ದಿದ್ದಾರೆ. ಆದರೇ ಗರ್ಭಿಣಿಯಾಗಿದ್ದರೂ ಕೂಡ ದೇಶವನ್ನು ಪ್ರತಿನಿಧಿಸಿ ಜನರ ಹೃದಯವನ್ನು ಗೆದ್ದಿದ್ದಾರೆ.





