ಮೊಹಿಯುದ್ದೀನ್ ಜುಮಾ ಮಸೀದಿ ಮೂಲರಪಟ್ಣ ಇದರ ಮಾಜಿ ಅಧ್ಯಕ್ಷ ಎಮ್ ಎ ಹಾಜಬ್ಬ ಮೂಲರಪಟ್ಣ ಮದೀನದಲ್ಲಿ ನಿಧನ
ಮೊಹಿಯುದ್ದೀನ್ ಜುಮಾ ಮಸೀದಿ ಮೂಲರಪಟ್ಣ ಇದರ ಮಾಜಿ ಅಧ್ಯಕ್ಷರು ಪ್ರಸ್ತುತ ಆಡಳಿತ ಕಮಿಟಿ ಸಕ್ರೀಯ ಸದಸ್ಯರು ಹಾಗೂ ದಾರುಲ್ ಉಲೂಂ ಮದ್ರಸ ಮೂಲರಪಟ್ಣ ಇದರ ಮಾಜಿ ಅಧ್ಯಕ್ಷರು ಹಾಗೂ ಬಡಗಬೆಳ್ಳೂರು ಗ್ರಾಮ ಪಂಚಾಯತ್ ಹಾಲಿ ಸದಸ್ಯರಾಗಿಯೂ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಚಿರಪರಿಚಿತ ಎಲ್ಲರೊಂದಿಗೆ ಬೆರೆಯುವ ಉತ್ತಮ ಒಡನಾಟ ಹೊಂದಿರುವ ವ್ಯಕ್ತಿತ್ವ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಜ! ಎಮ್.ಎ ಹಾಜಬ್ಬ ಮೂಲರಪಟ್ಣ ಬುಧವಾರ ದಂದು ಪವಿತ್ರ ಮದೀನ ಮಣ್ಣಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಅದರಂತಯೇ ಸುಬಹಿ ನಮಾಝ್ ಬಳಿಕ ಧಫನ ಕಾರ್ಯ ಜನ್ನತುಲ್ ಬಕೀಹ್ ಮದೀನದಲ್ಲಿ ನಡೆಯಿತು.ಇವರ ಅಗಲಿಕೆ ನಮ್ಮ ಜಮಾಅತ್ ಹಾಗೂ ನಮ್ಮ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ಇವರ ಅಗಲುವಿಕೆ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.ಸರ್ವಶಕ್ತನಾದ ಅಲ್ಲಾಹನು ಕುಟುಂಬಕ್ಕೆ ದುಃಖ ಸಹಿಸಿಕೊಳ್ಳುವ ಶಕ್ತಿ ನೀಡಲಿ. ಅವರ ಜೀವಿತಾವಧಿಯಲ್ಲಿ ಮಾಡಿದ ಉತ್ತಮ ಕಾರ್ಯಗಳನ್ನು ಸ್ವೀಕರಿಸಲಿ.ಅವರು ಮಾಡಿದ ಉಮ್ರಾ ಕರ್ಮವನ್ನು ಸರ್ವಶಕ್ತನಾದ ಅಲ್ಲಾಹನು ಸ್ವೀಕರಿಸಲಿ ಆಮೀನ್.ಮೃತರ ಹೆಸರಲ್ಲಿ ಎಲ್ಲಾ ಮೊಹಲ್ಲಾ ಗಳಲ್ಲಿ ಮಯ್ಯತ್ ನಮಾಝ್ ಮಾಡಬೇಕಾಗಿ ಹಾಗೂ ಮಗ್ಫಿರತ್ ಗಾಗಿ ಪ್ರಾರ್ಥಿಸಬೇಕೆಂದು
ಮೊಹಿಯುದ್ದೀನ್ ಜುಮಾ ಮಸೀದಿ ಮೂಲರಪಟ್ಣ ಇದರ ಆಡಳಿತ ಸಮಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಸರ್ವ ಜಮಾಅತ್ ಬಾಂಧವರಲ್ಲಿ ವಿನಂತಿಸಿದ್ದಾರೆ.




