ಒಂದೇ ದಿನ ರಾತ್ರಿ 6 ಮನೆ, 2 ದೇವಸ್ಥಾನಗಳಲ್ಲಿ ಚಡ್ಡಿಗ್ಯಾಂಗ್ ಸರಣಿಗಳ್ಳತನ
ದಾವಣಗೆರೆ: ಜಿಲ್ಲೆಯ ನ್ಯಾಮತಿಯಲ್ಲಿ ಒಂದೇ ದಿನ ರಾತ್ರಿ 6 ಮನೆಗಳು ಹಾಗೂ 2 ದೇವಸ್ಥಾನಗಳಲ್ಲಿ ಚಡ್ಡಿಗ್ಯಾಂಗ್ ಸರಣಿಗಳ್ಳತನ ಮಾಡಿದೆ.
ಚಡ್ಡಿಗ್ಯಾಂಗ್‍ನ ಚಲನವಲನಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳ್ಳರ ಗ್ಯಾಂಗ್ ಚಡ್ಡಿ, ಟೀ ಶರ್ಟ್ ಧರಿಸಿ ರಾತ್ರಿ ವೇಳೆ ಬೀದಿ ಬೀದಿಗಳಲ್ಲಿ ತಿರುಗಾಟ ನಡೆಸಿ ಇಡೀ ಪಟ್ಟಣವನ್ನು ಸುತ್ತಾಡಿದೆ. ಬಳಿಕ ನ್ಯಾಮತಿ ಪಟ್ಟಣದ ಕಾಳಮ್ಮ ಬೀದಿಯ ಕಾಳಮ್ಮ ದೇವಸ್ಥಾನದ ಬೀಗ ಒಡೆದು ಒಂದು ತೊಲ ತಾಳಿ, ನಂತರ ನೆಹರೂ ರಸ್ತೆಯಲ್ಲಿರುವ ಮೂಕಾಂಬಿಕ ದೇಗುಲದ ಹುಂಡಿ ಒಡೆದು ಹಣ ದೋಚಿದ್ದಾರೆ.




