ದನಗಳಿಗೆ ನೀರು ಕುಡಿಸುವಾಗ ಹೊಂಡಕ್ಕೆ ಬಿದ್ದು ವ್ಯಕ್ತಿ ಸಾವು
ಕಲಬುರಗಿ: ಕೃಷಿ ಹೊಂಡದಲ್ಲಿ ಬಿದ್ದು ವ್ಯಕ್ತಿ ಸಾವನ್ನಪ್ಪಿದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಉಡಚಣಹಟ್ಟಿ ಗ್ರಾಮದಲ್ಲಿ ನಡೆದಿದೆ. ಅಂಬಾದಾಸ್ ಸಂಜೆವಾಡ್ (37) ಸಾವನ್ನಪ್ಪಿದ್ದಾರೆ.
ದನಗಳಿಗೆ ನೀರು ಕುಡಿಸಲು ಹೋಗಿದ್ದ ವೇಳೆ ಕಾಲು ಜಾರಿ ಬಿದ್ದು ಅಂಬದಾಸ್ ಸಾವನ್ನಪ್ಪಿದ್ದಾರೆ. ಉಡಚಣಹಟ್ಟಿ ಗ್ರಾಮಸ್ಥರು ನೀರಿನ ಹೊಂಡದಲ್ಲಿದ್ದ ಮೃ*ತದೇಹವನ್ನ ಹೊರತೆಗೆದಿದ್ದಾರೆ.
ನೀರಿನಿಂದ ಮೃತದೇಹವನ್ನು ಹೊರತೆಗೆದಂತೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





