ತಡರಾತ್ರಿ ನಡೆದ ಹಿಟ್ ಆ್ಯಂಡ್ ರನ್: ಎಎಸ್‌ಐ ರಾಮಣ್ಣ ಮೃತ್ಯು
ಕೊಪ್ಪಳ: ತಾಲೂಕಿನಲ್ಲಿ ಹಾದು ಹೋಗಿರುವ ಚಿತ್ರದುರ್ಗ – ವಿಜಯಪುರ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಗುರುವಾರ ತಡರಾತ್ರಿ ನಡೆದ ಹಿಟ್ ಅಂಡ್ ರನ್ ಅವಘಡದಲ್ಲಿ ಎಎಸ್‌ಐ ಮೃತಪಟ್ಟಿದ್ದಾರೆ.
ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ. ಆಗಿದ್ದ ರಾಮಣ್ಣ (55) ಕೊಪ್ಪಳ ತಾಲ್ಲೂಕಿನ ವನಬಳ್ಳಾರಿ ಹತ್ತಿರ ಹೆದ್ದಾರಿ ಗಸ್ತು ಕರ್ತವ್ಯದಲ್ಲಿ ತೊಡಗಿದ್ದಾಗ ಈ ಘಟನೆ ನಡೆದಿದೆ.
ವಾಹನ ಡಿಕ್ಕಿ ಹೊಡೆದಿದ್ದು ರಾಮಣ್ಣ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವಾಹನ ಮತ್ತು ಚಾಲಕನ ಪತ್ತೆಗಾಗಿ ಪೊಲೀಸರು ಕ್ರಮಕೈಗೊಂಡಿದ್ದಾರೆ. ಅನುಮಾನಾಸ್ಪದವಾಗಿ ಓಡಾಡಿದ್ದ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.





