September 8, 2024

ರೀಲ್ಸ್ ಮಾಡುವಾಗ ಜಲಪಾತದಿಂದ ಬಿದ್ದು ಇನ್ಸ್‌ಸ್ಟಾ ತಾರೆ ಮೃತ್ಯು

0

ರಾಯಗಡ: ಯುವ ಜನಾಂಗದಲ್ಲಿ ರೀಲ್ಸ್ ಹುಚ್ಚು ಮಿತಿ ಮೀರಿ ಹೋಗಿದ್ದು ಅನೇಕರು ಪ್ರಾಣ ಕಳಕೊಂಡಿದ್ದರೆ ಆನೇಕ ಕುಟುಂಬಗಳಲ್ಲಿ ಬಿರುಕುಗಳು ಮೂಡಿವೆ. ಇದೀಗ ಇಂತಹುದೇ ಹುಚ್ಚಿಗೆ ಯುವತಿಯೊಬ್ಬಳು ಪ್ರಾಣ ಕಳಕೊಂಡಿದ್ದಾಳೆ.

ಖ್ಯಾತ ಇನ್ಸ್‌ಸ್ಟಾ ತಾರೆ ಅನ್ವಿ ಕಾಮ್ದಾರ್ (26) ರಾಯಗಡ ಬಳಿಯ ಕುಂಭೆ ಜಲಪಾತದಲ್ಲಿ ಬಿದ್ದು ಸಾವನ್ನಪ್ಪಿದ್ದಾಳೆ.

ಮುಂಬೈ ನಿವಾಸಿಯಾಗಿರುವ ಅನ್ವಿ ರೀಲ್ಸ್ ಮಾಡುವಾಗ 300 ಎತ್ತರದಿಂದ ಆಯಾ ತಪ್ಪಿ ಬಿದ್ದು ಪ್ರಾಣಕಳಕೊಂಡಿದ್ದಾರೆ. ಜುಲೈ 16ರಂದು ಅನ್ವಿ ತನ್ನ 7 ಸ್ನೇಹಿತರೊಂದಿಗೆ ಜಲಪಾತಕ್ಕೆ ಪ್ರವಾಸವನ್ನು ಕೈಗೊಂಡಿದ್ದರು. ಬುಧವಾರ ಬೆಳಗ್ಗೆ 10.30ರ ಸುಮಾರಿಗೆ ವಿಡಿಯೊ ಚಿತ್ರೀಕರಣ ಮಾಡುವಾಗ ಅನ್ವಿ ಆಳವಾದ ಕಂದಕಕ್ಕೆ ಜಾರಿ ಬಿದ್ದಿದ್ದಾರೆ.

Leave a Reply

Your email address will not be published. Required fields are marked *

error: Content is protected !!