March 20, 2026

ಮನೆಯ ಬಾಗಿಲ ಬೀಗ ಮುರಿದು ನಗ-ನಗದು ಕಳವು

0
image_editor_output_image1252563019-1721200016632.jpg

ವಿಜಯಪುರ: ಬೀಗ ಹಾಕಿದ್ದ ಮನೆಯಲ್ಲಿ ಬಾಗಿಲ ಕೊಂಡಿ ಕತ್ತರಿಸಿ ಕಳ್ಳತನ‌ ನಗ-ನಗದು ಕಳ್ಳತನ ಮಾಡಿರುವ ಘಟನೆ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ.

ಮುದ್ದೇಬಿಹಾಳ ಪಟ್ಟಣದ ಹುಡ್ಕೋ ಕಾಲೋನಿಯಲ್ಲಿರುವ ಮಹಮ್ಮದ್ ಹುಸೇನ್ ಎಂಬವರ ಬೀಗ ಹಾಕಿದ್ದ ಮನೆಯಲ್ಲಿ ಕಳ್ಳತನ‌ ನಡೆದಿದೆ.

ಉದ್ಯಮ ನಡೆಸುತ್ತಿರುವ ಹುಸೇನ್ ವ್ಯಾಪಾರ ವಹಿವಾಟಿನಿಂದ ಮಂಗಳವಾರ ಸಂಗ್ರಹಿಸಿದ್ದ 14,300 ರೂ. ನಗದು, ಚಿನ್ನದ ಉಂಗುರ, ಚಿನ್ನ-ಬೆಳ್ಳಿಯ ನಾಣ್ಯಗಳು ಸೇರಿದಂತೆ ಇತರೆ ವಸ್ತುಗಳು ಕಳ್ಳತನವಾಗಿದೆ ಎಂದು ಪ್ರಾಥಮಿಕ ಹಂತದಲ್ಲಿ ಮಾಹಿತಿ ಲಭ್ಯವಾಗಿದೆ.

ಮೊಹರಮ್ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದಲ್ಲೇ ಇರುವ ಮತ್ತೊಂದು ಮನೆಗೆ ಕುಟುಂಬದ ಸದಸ್ಯರು ಹೋಗಿದ್ದರು. ಮಂಗಳವಾರ ರಾತ್ರಿ 12 ಗಂಟೆ ಸುಮಾರಿಗೆ ಹುಸೇನ್ ಕೂಡ ಹುಡ್ಕೋ ಕಾಲೋನಿಯಲ್ಲಿನ ಮನೆಗೆ ಬೀಗ ಹಾಕಿ ಕುಟುಂಬ ಸದಸ್ಯರಿದ್ದ ಮನೆಗೆ ಹೋಗಿದ್ದರು.

Leave a Reply

Your email address will not be published. Required fields are marked *

error: Content is protected !!