March 20, 2026

ಚಿಕ್ಕಮಗಳೂರು: ಚಲಿಸುತ್ತಿದ್ದಾಗ ಏಕಾಏಕಿ ಕಳಚಿ ಬಿದ್ದ ಬಸ್ ನ ಟಯರ್

0
image_editor_output_image606419473-1721200332632.jpg

ಚಿಕ್ಕಮಗಳೂರು: ಚಲಿಸುತ್ತಿದ್ದ ಬಸ್ನ ಟಯರ್ ಏಕಾಏಕಿ ಕಳಚಿ ಬಿದ್ದ ಘಟನೆ ದೃಶ್ಯ ಸಮೇತ ಸೆರೆಯಾಗಿದೆ. ಕೂದಲೆಳೆ ಅಂತರದಲ್ಲಿ ಭಾರೀ ದುರ್ಘ*ಟನೆಯೊಂದು ಕೈ ತಪ್ಪಿದೆ.

ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರು ಪಟ್ಟಣದ ರೋಟರಿ ಸರ್ಕಲ್ನಲ್ಲಿ ಘಟನೆ ನಡೆದಿದೆ. ಸುಗಮ ಹೆಸರಿನ ಖಾಸಗಿ ಬಸ್ ಚಲಿಸುತ್ತಿದ್ದಾಗಲೇ ಟಯರ್ ಕಳಚಿದೆ. ಬಸ್ ನಿಧಾನಗತಿಯಲ್ಲಿದ್ದ ಕಾರಣ ರಸ್ತೆಯಲ್ಲಿ ಬಸ್ ನಿಂತಿದೆ. ಈ ದೃಶ್ಯ ಅಲ್ಲಿನ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪ್ರಯಾಣಿಕರನ್ನು ತುಂಬಿ ಸಾಗುತ್ತಿದ್ದ ಸುಗಮ ಬಸ್ ಬೆಂಗಳೂರಿನಿಂದ ಶೃಂಗೇರಿಗೆ ಪ್ರಯಾಣ ಬೆಳೆಸಿತ್ತು. ಸರ್ಕಲ್ ಬಳಿ ತಲುಪುತ್ತಿದ್ದಾಗ ಡ್ರೈವರ್ ನಿಧಾನಗತಿಯಲ್ಲಿ ಬಸ್ ಚಾಲನೆ ಮಾಡುತ್ತಿದ್ದರಿಂದ ದೊಡ್ಡ ಅವಾಂತರ ತಪ್ಪಿ ಹೋಗಿದೆ. ಬಸ್ಸಿನ ಎರಡು ಟೈಯರ್ಗಳು ಕಳಚಿ ರಸ್ತೆಯಲ್ಲಿ ಬಿದ್ದಿದೆ. ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ಪ್ರಾಣಹಾನಿಯಾಗಿಲ್ಲ.

Leave a Reply

Your email address will not be published. Required fields are marked *

error: Content is protected !!