ಕಾಸರಗೋಡು: ಸ್ವಿಚ್ ಒತ್ತುವಾಗ ವಿದ್ಯುತ್ ಶಾಕ್: ಗೃಹಿಣಿ ಮೃತ್ಯು
ಕಾಸರಗೋಡು: ಸ್ವಿಚ್ ಹಾಕುತ್ತಿದ್ದಾಗ ಕರೆಂಟ್ ಶಾಕ್ ಆಗಿ ಗೃಹಿಣಿ ಮೃತಪಟ್ಟ ಘಟನೆ ಕುಂಬಳೆ ಸೀತಾಂಗೋಳಿ ಸಮೀಪದ ಕುದ್ರೆಪ್ಪಾಡಿಯಲ್ಲಿ ನಡೆದಿದೆ.
ಕುದ್ರೆಪ್ಪಾಡಿಯ ಗೋಪಾಲ ಗಟ್ಟಿ ರವರ ಪತ್ನಿ ಹೇಮಾವತಿ (53) ಮೃತ ಪಟ್ಟವರು. ಸೋಮವಾರ ರಾತ್ರಿ ಮನೆಯ ಹೊರಗಡೆ ಅಡುಗೆ ಮಾಡಲು ನಿರ್ಮಿಸಿದ್ದ ಶೆಡ್ ನಲ್ಲಿ ಲೈಟ್ ನ ಸ್ವಿಚ್ ಹಾಕುತ್ತಿದ್ದಾಗ ಈ ಘಟನೆ ನಡೆದಿದೆ.
ಹೇಮಾವತಿ ಸೀತಾಂಗೋಳಿ ಕಿನ್ಫ್ರಾ ಕೈಗಾರಿಕಾ ಘಟಕದಲ್ಲಿನ ಇಂಟರ್ ಲಾಕ್ ತಯಾರಿ ಘಟಕದ ಅಡುಗೆ ಕೆಲಸಗಾರ್ತಿಯಾಗಿ ಕೆಲಸ ಮಾಡುತ್ತಿದ್ದರು. ವಿದ್ಯಾನಗರ ಠಾಣಾ ಪೊಲೀಸರು ಸ್ಥಳ ಮಹಜರು ನಡೆಸಿದರು.





