ಪ್ರೇಯಸಿಯ ಕಣ್ಣಿನ ಆಪರೇಷನ್‌ಗಾಗಿ ದ್ವಿಚಕ್ರ ವಾಹನಗಳ ಕಳವು: ಕುಂದಾಪುರ ಮೂಲದ ಆರೋಪಿಯ ಬಂಧನ
ಬೆಂಗಳೂರು: ಪ್ರೇಯಸಿಯ ಕಣ್ಣಿನ ಆಪರೇಷನ್‌ಗಾಗಿ ಹಣ ಹೊಂದಿಸಲು ದ್ವಿಚಕ್ರ ವಾಹನಗಳ ಕಳ್ಳತನ ಮಾಡುತ್ತಿದ್ದ ಕುಂದಾಪುರ ಮೂಲದ ಆರೋಪಿಯನ್ನು ಮಹಾಲಕ್ಷಮೀ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕುರುಬರಹಳ್ಳಿಯ ಸಚಿನ್ (28) ಬಂಧಿತ ಆರೋಪಿ. ಈತನಿಂದ 6.18 ಲಕ್ಷ ರೂ. ಮೌಲ್ಯದ 1 ಆಟೋ ಹಾಗೂ 9 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯ ಲಾಗಿದೆ.
ಇತ್ತೀಚೆಗೆ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ಅಕ್ಕಮಹಾದೇವಿ ಪಾರ್ಕ್ ಬಳಿ ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.




