March 25, 2026

ತಾಯಿ, ಮಗಳು ನೇಣುಬಿಗಿದು ಆತ್ಮಹತ್ಯೆ

0
image_editor_output_image1467026903-1721116011938.jpg

ಭಟ್ಕಳ: ತಾಯಿ ಮಗಳು ಒಂದೇ ದಿನ ನೇಣಿಗೆ ಕೊರಳೊಡ್ಡಿ ಜೀವಾಂತ್ಯ ಮಾಡಿದ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಯಲ್ವಡಿಕವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗೋರಿಕಲ್ಲು ಎಂಬಲ್ಲಿ ನಡೆದಿದೆ.

ಕೃಷ್ಣಮ್ಮ ನಾರಾಯಣ ನಾಯ್ಕ (57) ಹಾಗೂ ಮಗಳು ಮಾದೇವಿ ದೊಡ್ಡಯ್ಯ ನಾಯ್ಕ (36) ಮೃತ ದುರ್ದೈವಿಗಳಾಗಿದ್ದಾರೆ. ಇಬ್ಬರ ಸಾವಿಗೆ ಕಾರಣ ಇನ್ನೂ ಕೂಡ ಅಸ್ಪಷ್ಟವಾಗಿದ್ದು ಈ ನಿಟ್ಟಿನಲ್ಲಿ ಪೊಲೀಸ್ ತನಿಖೆ ಮುಂದುವರೆದಿದೆ.

ಕೃಷ್ಣಮ್ಮ ಅವರ ಮಗಳು ಮಾದೇವಿ ತಾಯಿಯ ಮನೆಯ ಸಮೀಪದಲ್ಲಿಯೇ ಮನೆ ಮಾಡಿಕೊಂಡು ವಾಸ್ತವ್ಯ ಮಾಡಿಕೊಂಡು ಬಂದಿದ್ದಳು. ಓರ್ವ ಮಗಳು ಹಾಗೂ ಓರ್ವ ಮಗನಿದ್ದಾನೆ. ಇಂದು ಮನೆಯಲ್ಲಿದ್ದವರೆಲ್ಲರೂ ಸಂಬಂಧಿಕರ ಮದುವೆ ಹೋಗಿರುವುದರಿಂದ ಒಬ್ಬಳೇ ಇದ್ದ ಮಾದೇವಿ ನೇಣಿಗೆ ಶರಣಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!