February 3, 2026

ಕಾಪು: ಸ್ಕೂಲ್ ಬಸ್ ಗೆ ಕಾರು ಡಿಕ್ಕಿ: ಜಖಂಗೊಂಡ ಕಾರು

0
image_editor_output_image-79080486-1720955514965

ಕಾಪು: ಸ್ಕೂಲ್ ಬಸ್ಸಿಗೆ ಕಾರೊಂದು ಢಿಕ್ಕಿ ಹೊಡೆದು ಜಖಂಗೊಂಡ ಘಟನೆ ಶನಿವಾರ ಮಧ್ಯಾಹ್ನ ಕಾಪು ಮೂಳೂರಿನಲ್ಲಿ ನಡೆದಿದೆ.

ಉಡುಪಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಕಾರು ಸ್ಕೂಲ್ ಬಸ್ಸಿಗೆ ಢಿಕ್ಕಿ ಹೊಡೆದಿದೆ. ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ – ಮೂಳೂರು ಡೈವರ್ಶನ್ ಬಳಿ ತಿರುವು ಪಡೆಯುತ್ತಿದ್ದಾಗ ಸ್ಕೂಲ್ ಬಸ್ಸಿಗೆ ಕಾರು ಢಿಕ್ಕಿ ಹೊಡೆದಿದೆ.

ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಕೂಲ್ ಬಸ್ಸಿನ ಬಲಭಾಗಕ್ಕೆ ಹಾನಿಯಾಗಿದೆ. ಇನ್ನು ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Leave a Reply

Your email address will not be published. Required fields are marked *

You may have missed

error: Content is protected !!