ಬಿಎಸ್ ಪಿ ಮುಖ್ಯಸ್ಥ ಕೆ.ಆರ್ಮ್ ಸ್ಟ್ರಾಂಗ್ ಹತ್ಯೆ ಪ್ರಕರಣ: ಆರೋಪಿ ಎನ್ಕೌಂಟರ್ ಗೆ ಬಲಿ
ಚೆನ್ನೈ: ತಮಿಳುನಾಡು ಬಿಎಸ್ ಪಿ ಮುಖ್ಯಸ್ಥ ಕೆ.ಆರ್ಮ್ ಸ್ಟ್ರಾಂಗ್ ಹತ್ಯೆ ಪ್ರಕರಣದ ಆರೋಪಿಯನ್ನು ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ. ತಿರುವೆಂಗಡಂ ಎನ್ ಕೌಂಟರ್ ನಲ್ಲಿ ಹತ್ಯೆಯಾದ ಆರೋಪಿ. ಚೆನ್ನೈನ ಮಾಧವರಂ ಬಳಿ ಎನ್ ಕೌಂಟರ್ ಮಾಡಲಾಗಿದ್ದು, ತಿರುವೆಂಗಡಂ ಬಲಿಯಾಗಿದ್ದಾನೆ.
ಆರ್ಮ್ ಸ್ಟ್ರಾಂಗ್ ಅವರನ್ನು ಹತ್ಯೆ ಮಾಡಲು ಬಳಸಿದ್ದ ಆಯುಧಗಳನ್ನು ವಶಕ್ಕೆ ಪಡೆಯಲೆಂದು ಪೊಲೀಸರು ಆರೋಪಿ ತಿರುವೆಂಗಡಂನೊಂದಿಗೆ ಮಾಧವರಂ ಬಳಿಯ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಆತ ಪೊಲೀಸರ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ವೇಳೆ ಪೊಲೀಸರು ತಿರುವೆಂಗಡಂ ಮೇಲೆ ಗುಂಡಿನ ದಾಳಿ ನಡೆಸಿ ಎನ್ ಕೌಂಟರ್ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಆರೋಪಿ ತಿರುವೆಂಗಡಂ ಹತ್ಯೆಗೂ ಮುನ್ನ ಆರ್ಮ್ಸ್ಟ್ರಾಂಗ್ ಚಲನವಲನಗಳ ಮೇಲೆ ನಿಗಾ ವಹಿಸಿ ಕೆಲ ದಿನಗಳ ಕಾಲ ಹಿಂಬಾಲಿಸಿದ್ದ. ಜುಲೈ 05ರಂದು ಪೆರಂಬದೂರಿನ ಅವರ ನಿವಾಸದ ಮೇಲೆ ದಾಳಿ ಮಾಡಿದ ಆರೋಪಿಗಳು ಅವರನ್ನು ಹತ್ಯೆ ಮಾಡಿದ್ದರು. ಬಳಿಕ ಆರೋಪಿಗಳು ತಲೆಮಾರಿಸಿಕೊಂಡಿದ್ದರು.





