March 25, 2026

ಪುತ್ತೂರು: ಹಾಸ್ಟೆಲ್ ನಿಂದ ತಪ್ಪಿಸಿಕೊಂಡು ಬೆಗಳೂರಿಗೆ ಹೊರಟ ಬಾಲಕರು: ರೈಲ್ವೇ ನಿಲ್ದಾಣ ನಾಲ್ವರು ಬಾಲಕರ ರಕ್ಷಣೆ

0
image_editor_output_image85761335-1720956423622

ಪುತ್ತೂರು: ಹಾಸ್ಟೆಲ್‌ನಿಂದ ತಪ್ಪಿಸಿಕೊಂಡು ರೈಲಿನಲ್ಲಿ ಬೆಂಗಳೂರಿಗೆ ಹೊರಟಿದ್ದ ನಾಲ್ವರು ಬಾಲಕರನ್ನು ರಕ್ಷಣೆ ಮಾಡಿರುವ ಘಟನೆ ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.

ಜು.13ರಂದು ಟಿಕೆಟ್ ಕೌಂಟರ್ ಬಳಿ ಬಂದ ವಿದ್ಯಾರ್ಥಿಗಳು ಬೆಂಗಳೂರಿಗೆ ಹೊರಡುವ ರೈಲಿನ ಬಗ್ಗೆ ಮಾಹಿತಿ ಪಡೆದು ಟಿಕೆಟ್‌ ನೀಡುವಂತೆ ಕೇಳಿದ್ದಾರೆ.

ಇವರ ಬಗ್ಗೆ ಅನುಮಾನಗೊಂಡ ರೈಲ್ವೇ ಸಿಬ್ಬಂದಿ ವಿದ್ಯಾರ್ಥಿಗಳನ್ನು ವಿಚಾರಿಸಿದಾಗ, ಅವರು ತಪ್ಪಿಸಿಕೊಂಡು ಬಂದಿರುವ ಸಂಗತಿ ಗೊತ್ತಾಗಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಬಾಲಕರನ್ನು ವಿಚಾರಣೆ ನಡೆಸಿ ಅವರ ಮನವೊಲಿಸಿ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಬಾಲಕರು ಪೋಷಕರ ಜತೆಯಲ್ಲಿದ್ದು, ಪ್ರಕರಣ ಸುಖಾಂತ್ಯಗೊಂಡಿದೆ.

ಪುತ್ತೂರು ರೈಲು ನಿಲ್ದಾಣದ ಸೀನಿಯರ್ ಟೆಕ್‌ ಸಿಬ್ಬಂದಿ ಕುಮಾರ್, ವಾಸಿಮ್ ಸಯ್ಯದ್, ವಸಂತ್, ಮಾಲಶ್ರೀ ಅವರ ಸಮಯಪ್ರಜ್ಞೆಯಿಂದ ಮಕ್ಕಳು ಸುರಕ್ಷಿತವಾಗಿ ಹೆತ್ತವರ ಮಡಿಲು ಸೇರಿದ್ದಾರೆ.

Leave a Reply

Your email address will not be published. Required fields are marked *

error: Content is protected !!