August 28, 2026

ಟ್ರ್ಯಾಕ್ಟರ್ ಮಗುಚಿ ಚಾಲಕ ಸಾವು

0
image_editor_output_image-1286182512-1720876844042.jpg

ಮೈಸೂರು: ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲ್ಲೂಕು ಹಳೆ ಮಿರ್ಲೆ ಗ್ರಾಮದಲ್ಲಿ ಟ್ರ್ಯಾಕ್ಟರ್ ಮಗುಚಿ ಚಾಲಕ ಸಾವನ್ನಪ್ಪಿದ್ದಾನೆ.

ಕುಮಾರ್ ಎಂಬುವರ‌ ಪುತ್ರ ಮನೋಜ್ (23) ಮೃತಪಟ್ಟಿದ್ದಾರೆ. ಮನೋಜ್ ಜಮೀನು ಉಳುಮೆ ಮಾಡಲು ತೆರಳುತ್ತಿದ್ದಾಗ ದುರ್ಘಟನೆ ನಡೆದಿದೆ. ಚಾಮರಾಜ ನಾಲೆಯ ಏರಿಯಾದ ಮೇಲೆ ಹೋಗುತ್ತಿದ್ದಾಗ ಆಕ್ಮಸಿಕವಾಗಿ ಟ್ರ್ಯಾಕ್ಟರ್ ಉರುಳಿ ಬಿದ್ದಿದೆ. ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!