ಬಂಟ್ವಾಳ: ಡೆಂಗ್ಯೂ ಜ್ವರದಿಂದ ಶಂಭೂರಿನ ನಿವಾಸಿ ಮೃತ್ಯು
ಬಂಟ್ವಾಳ: ಮೂಲತಃ ಬಂಟ್ವಾಳ ಶಂಭೂರು ನಿವಾಸಿ, ಪ್ರಸ್ತುತ ಪುತ್ತೂರಿನ ಕಬಕದಲ್ಲಿ ನೆಲೆಸಿದ್ದ ವ್ಯಕ್ತಿಯೊಬ್ಬರು ಡೆಂಗ್ಯೂ ಜ್ವರದಿಂದ ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಶಂಭೂರು ಗರಡಿ ಮನೆ ನಿವಾಸಿ ಯತೀಶ್ (50) ಮೃತಪಟ್ಟ ದುರ್ದೈವಿ. ಅವರಿಗೆ ಜು. 10ರಂದು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನ ಕೆಲಸದ ಸ್ಥಳದಿಂದ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಔಷಧಕ್ಕಾಗಿ ತೆರಳಿದ್ದರು.





