May 5, 2026

ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

0
image_editor_output_image1896809450-1720683047881.jpg

ಕೊಚ್ಚಿ : ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರ ಶವ ಸುಟ್ಟ ಸ್ಥಿತಿಯಲ್ಲಿ ಕೇರಳದ ಅಂಗಮಾಲಿಯ ಮನೆಯೊಂದಲ್ಲಿ ಪತ್ತೆಯಾಗಿದೆ.

ಶವಗಳು ಸಿಕ್ಕ ಮನೆಯ ಕೋಣೆಯಲ್ಲಿ ಪೆಟ್ರೋಲ್ ಕ್ಯಾನ್ ಇಟ್ಟ ಕುರುಹು ಸಿಕ್ಕಿದ್ದು ಇದೊಂದು ಸಾಮೂಹಿಕ ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ. ಮೃತರನ್ನು ಬಿನೀಶ್ (45), ಅವರ ಪತ್ನಿ ಅನುಮೋಲ್ ಮ್ಯಾಥ್ಯೂ (40), ಮಕ್ಕಳಾದ ಜೊವಾನ್ನಾ (8) ಮತ್ತು ಜಸ್ವಿನ್ (5) ಎಂದು ಗುರುತಿಸಲಾಗಿದೆ. ಮೃತ ಬಿನೀಶ್ ಪೆಟ್ರೋಲ್ ಖರೀದಿಸುತ್ತಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು ಇದರೊಂದಿಗೆ ಕುಟುಂಬವು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ. ಉದ್ಯಮಿಯಾಗಿದ್ದ ಬಿನೀಶ್ ಅಂಗಮಾಲಿಯ ಅಂಗಡಿಕಡವು ಎಂಬಲ್ಲಿ ವಾಸವಿದ್ದು ಭಾರಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು ಎನ್ನಲಾಗಿದೆ. ಮನೆಯ ನೆಲಮಹಡಿಯಲ್ಲಿ ಮಲಗಿದ್ದ ಬಿನೀಶ್ ಅವರ ತಾಯಿ ಚಿನ್ನಮ್ಮ ಅವರು ಮೇಲಿನ ಕೋಣೆಯಲ್ಲಿ ಬೆಂಕಿ ಹರಡುವುದನ್ನು ಮೊದಲು ನೋಡಿದ್ದು ಸಹಾಯಕ್ಕೆ ಕೂಗಿದ್ದಾರೆ, ಸ್ಥಳೀಯರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!