March 17, 2026

ಸುಳ್ಯ: ಅಡಿಕೆ‌ಗೆ ಹಳದಿ ರೋಗ ಬಾಧೆಯಿಂದ ನಷ್ಟ: ಕೃಷಿಕ ಆತ್ಮಹತ್ಯೆ

0
image_editor_output_image-1523887038-1720072950634.jpg

ಸುಳ್ಯ: ಅಡಿಕೆ ಕೃಷಿಗೆ ಭಾಧಿಸಿರುವ ಹಳದಿ ರೋಗದಿಂದ ಕಂಗೆಟ್ಟ ಕೃಷಿಕರೊಬ್ಬರು ಆತ್ಮಹತ್ಯೆ ಗೆ ಶರಣಾದ ಘಟನೆ ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಮಡಪ್ಪಾಡಿಯಲ್ಲಿ ನಡೆದಿದೆ.

ಸುಳ್ಯ ತಾಲೂಕು ಮಡಪ್ಪಾಡಿ ಬಲ್ಕಜೆಯ ಕೃಷಿಕ ಸೀತಾರಾಮ ಗೌಡರು (55) ಆತ್ಮಹತ್ಯೆ ಗೆ ಶರಣಾದ ದುರ್ದೈವಿಯಾಗಿದ್ದಾರೆ.

ಹಲವು ವರ್ಷಗಳಿಂದ ಅಡಿಕೆ ತೋಟಕ್ಕೆ ಹಳದಿ ರೋಗ ಮತ್ತು ಎಲೆ ಚುಕ್ಕಿ ರೋಗ ತಗುಲಿದ್ದು ಕಷ್ಟದಿಂದ ಮಾಡಿದ್ದ ಅಡಿಕೆ ಬೆಳೆ ಇಲ್ಲದಂತಾಗಿತ್ತು. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಮನನೊಂದು ಆತ್ಮಹತ್ಯೆ ಗೆ ಶರಣಾಗಿರಬಹುದೆಂದು ಶಂಕಿಸಲಾಗಿದೆ.

ಬೆಳಗ್ಗೆ ಮನೆಯಲ್ಲಿ ವಿಷ ಸೇವಿದ್ದನ್ನ ಗಮನಿಸಿದ್ದ ಮನೆ ಮಂದಿ ಕೂಡಲೇ ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕರಿಯಾಗದೇ ಮೃತಪಟ್ಟಿದ್ದಾರೆ. ಸುಳ್ಯ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!