ಕಾಂಗ್ರೆಸ್ ಮುಖಂಡರ ಸಹೋದರನ ಗುಂಡಿಕ್ಕಿ ಹತ್ಯೆ
ನವದೆಹಲಿ: ಜಮೀನು ವಿವಾದದ ವಿಚಾರವಾಗಿ ಹರಿಯಾಣದ ಫರಿದಾಬಾದ್‍ನಲ್ಲಿ ಕಾಂಗ್ರೆಸ್ ಮುಖಂಡರೊಬ್ಬರ ಸಹೋದರನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಹತ್ಯೆಗೀಡಾದ ವ್ಯಕ್ತಿಯನ್ನು ಕುನಾಲ್ ಭದನಾ ಎಂದು ಗುರುತಿಸಲಾಗಿದೆ. ಮಸೀದಿ ಚೌಕ್ ಬಳಿ ಕುನಾಲ್ ನಿಂತಿದ್ದಾಗ ದುಷ್ಕರ್ಮಿಗಳು ಅವರ ಸಮೀಪ ಬಂದು ಗಲಾಟೆ ಮಾಡಿದ್ದಾರೆ. ಬಳಿಕ ಅವರನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಹತ್ಯೆಗೈದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.




