March 17, 2026

ಕಿಡ್ನಾಪ್ ಮಾಡಿ ಮಕ್ಕಳ ಮಾರಾಟ: ಆರೋಪಿಗಳ ಬಂಧನ

0
image_editor_output_image-1945595316-1719466332531.jpg

ತುಮಕೂರು: ಕಿಡ್ನಾಪ್ ಮಾಡಿ ಮಾರಾಟ ಮಾಡುತ್ತಿದ್ದ ಮಕ್ಕಳ ಮಾರಾಟ ಜಾಲವನ್ನು ತುಮಕೂರು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಮಾರಾಟವಾಗಿದ್ದ 9 ಮಕ್ಕಳನ್ನು ಪತ್ತೆಹಚ್ಚಿದ್ದಾರೆ.

ಗುಬ್ಬಿಯಲ್ಲಿ 11 ತಿಂಗಳ ಮಗು ಕಿಡ್ನಾಪ್ ಪ್ರಕರಣದ ಬೆನ್ನತ್ತಿದಾಗ ಈ ಜಾಲ ಬೆಳಕಿಗೆ ಬಂದಿದೆ.

ಪ್ರಕರಣ ಸಂಬಂಧ 5 ಮಂದಿ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಇನ್ನೂ 1 ಮಗು ಸಾವನ್ನಪ್ಪಿದ್ದು, 3 ಮಕ್ಕಳಿಗಾಗಿ ಶೋಧ ನಡೆಸುತ್ತಿದ್ದಾರೆ. ಗರ್ಭ ಧರಿಸಿದ ಅವಿವಾಹಿತ ಮಹಿಳೆಯರು ಹಾಗೂ ಅನೈತಿಕ ಗರ್ಭ ಧರಿಸಿದವರಿಂದ ಮಕ್ಕಳನ್ನು ಖರೀದಿ ಮಾಡಿ 2ರಿಂದ 3 ಲಕ್ಷ ರೂ.ಗೆ ಮಾರಾಟ ಮಾಡಲಾಗುತ್ತಿದೆ‌.

ಹುಳಿಯಾರಲ್ಲಿ ಮೆಹಬೂಬ್ ಪಾಷಾ ಎಂಬಾತನ ಖಾಸಗಿ ಆಸ್ಪತ್ರೆಯಲ್ಲಿ ಮಕ್ಕಳು ಕೊಳ್ಳುವವರನ್ನು ಗರ್ಭಿಣಿಯರೆಂದು ದಾಖಲಿಸಿಕೊಂಡು ಅವರಿಗೆ ಹುಟ್ಟಿದ ಮಗುವೆಂದು ಸರ್ಟಿಫಿಕೇಟ್ ನೀಡಲಾಗುತ್ತಿತ್ತು. ಎಸ್‌ಪಿ ಕೆ.ವಿ.ಅಶೋಕ್ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ಕಾರ್ಯಾಚರಣೆ ನಡೆಸಿದ್ದು, ಮಹೇಶ್ ಯುಡಿ, ಮೆಹಬೂಬ್ ಪಾಷಾ, ಕೆ.ಎನ್.ರಾಮಕೃಷ್ಣ, ಹನುಮಂತರಾಜು, ಮುಬಾರಕ್ ಪಾಷಾ, ಪೂರ್ಣಿಮಾ ಎನ್. ಹಾಗೂ ಸೌಜನ್ಯ ಎಂಬವರನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!