March 17, 2026

ಸಾರಿಗೆ ಬಸ್ ಢಿಕ್ಕಿ: ಇಂಜಿನಿಯರ್ ಮೃತ್ಯು

0
image_editor_output_image-1582252694-1719465856009.jpg

ಮಂಡ್ಯ: ಸಾರಿಗೆ ಬಸ್ ಡಿಕ್ಕಿಯಾಗಿ ಕೆಪಿಟಿಸಿಎಲ್ (ಟಿಎಲ್‍ಐ) ಇಂಜಿನಿಯರ್ ಒಬ್ಬರು ಮೃತಪಟ್ಟ ಘಟನೆ ಮಳವಳ್ಳಿ ತಾಲೂಕಿನ ಕಣಿಗಲ್ ಗೇಟ್ ಬಳಿ ನಡೆದಿದೆ.

ಮೃತರನ್ನು ಮಳವಳ್ಳಿ ತಾಲೂಕಿನ ಮಂಚನಹಳ್ಳಿ ಗ್ರಾಮದ ಪಿ.ರವಿ (42) ಎಂದು ಗುರುತಿಸಲಾಗಿದೆ. ಶಿವನಸಮುದ್ರ ಬಳಿಯ ಕೆಪಿಟಿಸಿಎಸ್‍ನ ವಿಭಾಗದಲ್ಲಿ ಕಿರಿಯ ಇಂಜಿನಿಯರ್ ಆಗಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು.

ತಮ್ಮ ಬೈಕ್‍ನಲ್ಲಿ ಮಳವಳ್ಳಿ ಪಟ್ಟಣಕ್ಕೆ ಹೋಗಿ ಮಂಚನಹಳ್ಳಿಗೆ ತೆರಳುತ್ತಿದ್ದಾಗ ಈ ಅವಘಡ ನಡೆದಿದೆ.

Leave a Reply

Your email address will not be published. Required fields are marked *

You may have missed

error: Content is protected !!