ಜಲಾಶಯಕ್ಕೆ ಪಿಕ್ನಿಕ್‍ಗೆ ಬಂದಿದ್ದ ನಾಲ್ವರು ವಿದ್ಯಾಥಿಗಳು ನೀರಿನಲ್ಲಿ ಮುಳುಗಿ ಸಾವು
ಮುಂಬೈ: ರಾಯಗಡ ಜಿಲ್ಲೆಯ ಖಲಾಪುರ್‌ನ ಸಾಯಿ ಜಲಾಶಯಕ್ಕೆ ಪಿಕ್ನಿಕ್‍ಗೆ ಬಂದಿದ್ದ ವೇಳೆ ನಾಲ್ವರು ವಿದ್ಯಾಥಿಗಳು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ.
ಮೃತರನ್ನು ಏಕಲವ್ಯ ಸಿಂಗ್ (18), ಇಶಾಂತ್ ಯಾದವ್ (19), ಆಕಾಶ್ ಧರ್ಮದಾಸ್ (26) ಮತ್ತು ರಣತ್ ಮಹದು ಬಂದಾ (18) ಎಂದು ಗುರುತಿಸಲಾಗಿದೆ. ಜಲಾಶಯದಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಓರ್ವ ವಿದ್ಯಾರ್ಥಿ ಮುಳುಗಿದ್ದಾನೆ. ಈ ವೇಳೆ ಆತನನ್ನು ರಕ್ಷಿಸಲು ಯತ್ನಿಸಿದ ಮೂವರು ಸ್ನೇಹಿತರು ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರು ಮುಂಬೈನ ಬಾಂದ್ರಾದ ಖಾಸಗಿ ಕಾಲೇಜಿನವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ




