February 4, 2026

ಉಡುಪಿ: ಮರ ಕಡಿಯಲು ಅನುಮತಿಗೆ ಲಂಚದ ಬೇಡಿಕೆ: ಬೈಂದೂರು ಅರಣ್ಯ ಅಧಿಕಾರಿಯ ಬಂಧನ

0
image_editor_output_image792779180-1719002855360.jpg

ಉಡುಪಿ: ಮರ ಕಡಿಯಲು ಅನುಮತಿಗೆ ಲಂಚ ಸ್ವೀಕರಿಸುತ್ತಿದ್ದ ಬೈಂದೂರು ಉಪ ವಲಯ ಅರಣ್ಯ ಅಧಿಕಾರಿಯನ್ನು ಉಡುಪಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಈ ವೇಳೆ ಇನ್ನೋರ್ವ ಆರೋಪಿ ಅರಣ್ಯ ವೀಕ್ಷಕ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಬೈಂದೂರು ವಲಯದ ಉಪವಲಯ ಅರಣ್ಯಧಿಕಾರಿ ಬಂಗಾರಪ್ಪ ಲೋಕಾಯುಕ್ತ ಬಲೆಗೆ ಬಿದ್ದ ಆರೋಪಿ.

ಬೈಂದೂರು ಅರಣ್ಯ ವೀಕ್ಷಕ ವಿನಾಯಕ ದಾಳಿ ವೇಳೆ ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಿರೂರಿನ ಮುಹಮ್ಮದ್ ಅನ್ವರ್ ಹಸನ್ ಎಂಬವರು ತನ್ನ ಪಟ್ಟ ಸ್ಥಳದಲ್ಲಿರುವ ಹಲಸಿನ ಮರವನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಅನುಮತಿ ನೀಡುವ ಬಗ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಉಪವಲಯ ಅರಣ್ಯಧಿಕಾರಿ ಅನುಮತಿ ನೀಡಬೇಕಾದರೆ 4000 ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು

Leave a Reply

Your email address will not be published. Required fields are marked *

error: Content is protected !!