May 6, 2026

ಪ್ರೀತಿ ‌ನಿರಾಕರಿಸಿದಕ್ಕೆ ಮನನೊಂದು ಯುವಕ ವಿಷ ಸೇವಿಸಿ ಆತ್ಮಹತ್ಯೆ

0
image_editor_output_image1321041893-1718518412322.jpg

ರಾಯಚೂರು: ಯುವತಿ ಪ್ರೀತಿ ‌ನಿರಾಕರಿಸಿದಕ್ಕೆ ಮನನೊಂದು ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ತಾಲೂಕಿನ ಮಲಿಯಾಬಾದ್ ಅರಣ್ಯ ಪ್ರದೇಶದಲ್ಲಿ ನಡೆದಿದೆ. ವಿಷ ಸೇವಿಸಿದ ಬಳಿಕ ಅಜ್ಞಾತ ಸ್ಥಳಕ್ಕೆ ತೆರಳಿದ್ದ ಯುವಕ ಅಸ್ವಸ್ಥಗೊಂಡು ಮೃತಪಟ್ಟಿದ್ದಾನೆ.

ಗಧಾರ್ ಗ್ರಾಮದ ಹನುಮೇಶ್ (21) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ನಗರದ ನವಯುಗ ಕಾಲೇಜಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿಯಾಗಿದ್ದಾನೆ.

ಈತ ಕೆಲ ವರ್ಷಗಳಿಂದ ಪಿಯುಸಿ ಓದುತ್ತಿದ್ದ ಅತ್ತೆ ಮಗಳನ್ನು ಪ್ರೀತಿ ಮಾಡುತ್ತಿದ್ದ. ಆಕೆಯನ್ನೇ ಮದುವೆ ಆಗುತ್ತೀನಿ ಎಂದು ಹಠ ಹಿಡಿದಿದ್ದ. ಆದರೆ, ಮದುವೆಗೆ ಯುವತಿ ಮನೆಯವರು ನಿರಾಕರಿಸಿದ್ದರು. ಈ ಹಿನ್ನೆಲೆ ಹಾಸ್ಟೆಲ್‌ನಿಂದ ಯುವಕ ಹೊರಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Leave a Reply

Your email address will not be published. Required fields are marked *

error: Content is protected !!