May 6, 2026

ಪುತ್ತೂರು: ಪತಿ ಕಟ್ಟಿದ್ದ ತಾಳಿಯನ್ನು ಮನೆಯಲ್ಲಿ ಕಳಚಿಟ್ಟು ಯುವತಿ ನಾಪತ್ತೆ

0
image_editor_output_image1986453229-1718519395602.jpg

ಪುತ್ತೂರು: ಗೃಣಿಯೊಬ್ಬರು ಪತಿ ಕಟ್ಟಿದ್ದ ತಾಳಿಯನ್ನು ಮನೆಯಲ್ಲಿ ಕಳಚಿಟ್ಟು ನಾಪತ್ತೆಯಾಗಿರುವ ಘಟನೆ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಭಕ್ತಕ್ಕೋಡಿ ಸಮೀಪದ ಕಲ್ಲಗುಡ್ಡೆ ಎಂಬಲ್ಲಿ ನಡೆದಿದೆ. ಆಕೆ ಯುವಕನೊಬ್ಬನ ಜತೆ ತೆರಳಿರುವ ಶಂಕೆ ವ್ಯಕ್ತವಾಗಿದೆ.

ಸರ್ವೆ ಗ್ರಾಮದ ಕಲ್ಲಗುಡ್ಡೆ ನಿವಾಸಿ ಹರೀಶ್ ಅವರ ಪತ್ನಿ ದೀಪಿಕಾ (23) ನಾಪತ್ತೆಯಾದವರು. ದೀಪಿಕಾ ಗುರುವಾರ ಮಂಜಾನೆ ವೇಳೆಯಲ್ಲಿ ಮನೆಯಿಂದ ಕಾಣೆಯಾಗಿದ್ದಾಳೆ, ತಾಳಿಯನ್ನು ಮನೆಯಲ್ಲೇ ಬಿಚ್ಚಿಟ್ಟು ಹೋಗಿದ್ದಾಳೆ. ಮನೆಯ ವ್ಯಾಪ್ತಿಯಲ್ಲಿ ಹಾಗೂ ಸಂಬಂಧಿಕರನ್ನು ಸಂಪರ್ಕಿಸಿ ಹುಡುಕಾಡಿದರೂ ಆಕೆ ಇನ್ನೂ ಪತ್ತೆಯಾಗಿಲ್ಲ ಎಂದು ಹರೀಶ್ ಅವರು ಸಂಪ್ಯ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ದೀಪಿಕಾ ಮೂರು ತಿಂಗಳ ಹಿಂದೆ ಕಡಬ ಸಮೀಪದ ಕರ್ಮಾಯಿಯ ಪ್ರಶಾಂತ ಎಂಬಾತನ ಜತೆ ಹೋಗಿದ್ದು, ಬಳಿಕ ಆಕೆಯನ್ನು ಮಂಗಳೂರಿನಲ್ಲಿ ಪತ್ತೆ ಮಾಡಿ ಮನೆಗೆ ಕರೆದುಕೊಂಡು ಬರಲಾಗಿತ್ತು. ಮತ್ತೆ ಆಕೆ ಪ್ರಶಾಂತ್ ಜತೆ ತೆರಳಿರುವ ಶಂಕೆ ಇದೆ ಎಂದು ಪತಿ ಹರೀಶ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಶಂಕೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!