May 6, 2026

ಪೊಲೀಸ್ ಠಾಣೆಯ ಎದುರು ಪೆಟ್ರೊಲ್ ಸುರಿದು ವ್ಯಕ್ತಿ ಆತ್ಮಹತ್ಯೆ

0
image_editor_output_image-1484439421-1718518274071.jpg

ಜೊಯಿಡಾ: ಪೊಲೀಸ್ ಅಧಿಕಾರಿಗಳು ಅವ್ಯವಹಾರ ನಡೆಸಿದ್ದಾರೆ, ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ತಾಲೂಕಿನ ರಾಮನಗರ ಪೊಲೀಸ್ ಠಾಣೆಯ ಎದುರು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

ರಾಮನಗರದ ಭಾಸ್ಕರ ಬೋಂಡೆಲ್ಕರ್ ಗುರುವಾರ ರಾತ್ರಿ ರಾಮನಗರ ಪೊಲೀಸ್ ಠಾಣೆಯ ಎದುರು ಪೆಟ್ರೊಲ್ ಸುರಿದು ಬೆಂಕಿ ಹೆಚ್ಚಿಕೊಂಡಿದ್ದರು. ಅವರನ್ನು ಪೊಲೀಸರು ರಕ್ಷಿಸಿ ಬೆಳಗಾವಿ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿದ್ದರು. ಶನಿವಾರ ಬೆಳಗ್ಗೆ ಅವರು ಮೃತಪಟ್ಟಿದ್ದಾರೆ. ಪೊಲೀಸರು ಭಾಸ್ಕರ ವಿರುದ್ಧವೇ ಆತ್ಮಹತ್ಯೆಗೆ ಯತ್ನ ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!