ಚೀಟಿ ದುಡ್ಡಿಗಾಗಿ ವ್ಯಕ್ತಿಯ ಬರ್ಬರ ಹತ್ಯೆ
ಬೆಂಗಳೂರು: ಚೀಟಿ ಹಣದಲ್ಲಿ ಮೋಸ ಮಾಡಿದ ಆರೋಪದಲ್ಲಿ ವ್ಯಕ್ತಿಯೋರ್ವ ಚಿಟ್ ಫಂಡ್ ಡೆವಲಪ್ಮೆಂಟ್ ಆಫೀಸರ್‌ನನ್ನು ಭೀಕರವಾಗಿ ಹತ್ಯೆಗೈದು ತುಂಡುತುಂಡಾಗಿ ಕತ್ತರಿಸಿದ ಘಟನೆ ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೆ.ವಿ.ಶ್ರೀನಾಥ್ (34) ಕೊಲೆಯಾದ ವ್ಯಕ್ತಿ. ಮಾಧವ ರಾವ್ ಕೊಲೆ ಆರೋಪಿ.
ಐದು ಲಕ್ಷ ಚೀಟಿ ಹಣ ಮೋಸ ಮಾಡಿದ ಆರೋಪದಲ್ಲಿ ಕೊಲೆ ಮಾಡಲಾಗಿದೆ. ಮೇ 28ರ ಬೆಳಗ್ಗೆ ಮನೆಯಿಂದ ಹೊರಹೋಗಿದ್ದ ಶ್ರೀನಾಥ್ ಮನೆಗೆ ವಾಪಸ್ ಆಗಿರಲಿಲ್ಲ.
ಮೇ 29ರಂದು ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ಪತ್ನಿ ದೂರು ನೀಡಿದ್ದರು. ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಶ್ರೀನಾಥ್ ಮಾಧವ ರಾವ್ ಮನೆಗೆ ಹೋಗಿರೋದು ಪತ್ತೆಯಾಗಿತ್ತು. ಕೆ.ಆರ್.ಪುರಂನ ವಿಜಿನಪುರದಲ್ಲಿರುವ ಮಾಧವ ರಾವ್ ಮನೆಗೆ ಶ್ರೀನಾಥ್ ಹೋಗಿರೋದು ಪತ್ತೆಯಾಗಿದೆ.





