ತಂಗಿಯ ಎದುರೇ ಅಣ್ಣನ ಕೊಲೆ
ಮೈಸೂರು: ವರದಕ್ಷಿಣೆ ಕಿರುಕುಳ ವಿಚಾರಕ್ಕೆ ಹೆಂಡತಿಯ ಅಣ್ಣನನ್ನೇ ಗಂಡ ಚುಚ್ಚಿ ಕೊಲೆ ಮಾಡಿದ ಘಟನೆ ಮೈಸೂರಿನ ಕುವೆಂಪು ನಗರದಲ್ಲಿ ನಡೆದಿದೆ.
ಅಭಿಷೇಕ್ (27) ಕೊಲೆಯಾದ ಅಣ್ಣ. ರವಿಚಂದ್ರ ಕೊಲೆ ಮಾಡಿದ ಆರೋಪಿ. ಬಾವ ಮತ್ತು ಬಾಮೈದ ನಡುವೆ ವರದಕ್ಷಿಣೆ ವಿಚಾರಕ್ಕೆ ಗಲಾಟೆ ಶುರುವಾಗಿ ಕೊಲೆಯಲ್ಲಿ ಅಂತ್ಯ ಕಂಡಿದೆ.
ರವಿಚಂದ್ರ ಜಿಮ್ ತೆರೆಯಲು 5 ಲಕ್ಷ ಹಣ ಕೇಳಿದ್ದ. ಪ್ರತಿನಿತ್ಯ ಪತ್ನಿ ವಿದ್ಯಾಗೆ ವರದಕ್ಷಿಣೆ ತರುವಂತೆ ರವಿಚಂದ್ರ ಕಿರುಕುಳ ನೀಡುತ್ತಿದ್ದ. ಗಲಾಟೆ ಮಾಡುತ್ತಿದ್ದ ವೇಳೆ ವಿದ್ಯಾ ಅಣ್ಣನಿಗೆ ಕರೆ ಮಾಡಿದ್ದಾಳೆ. ವಿದ್ಯಾ ಅಣ್ಣ ಅಭಿಷೇಕ್ ಮನೆಗೆ ಬರುತ್ತಿದ್ದಂತೆ ಬಾಗಿಲು ಹಾಕಿ ರವಿಚಂದ್ರ ಏಕಾಏಕಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಅಭಿಷೇಕ್ ತಾಯಿ ಭಾಗ್ಯಮ್ಮ, ತಂಗಿಗೂ ಹಲ್ಲೆ ನಡೆಸಿದ್ದಾನೆ.





