ಬಿಜೆಪಿಯ ಗೆಲುವಿಗಾಗಿ ದೇವಿಗೆ ತನ್ನ ಕೈ ಬೆರಳನ್ನೇ ಕತ್ತರಿಸಿದ BJP ಕಾರ್ಯಕರ್ತ

ಛತ್ತೀಸ್‌ಘಡ್: ಇಲ್ಲೊಬ್ಬ ಬಿಜೆಪಿ ಕಾರ್ಯಕರ್ತ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿಯಾಗಬೇಕೆಂದು ದೇವಿಗೆ ಪ್ರಾರ್ಥನೆ ಸಲ್ಲಿಸಿ ತನ್ನ ಕೈ ಬೆರಳನ್ನೇ ಅರ್ಪಣೆ ಮಾಡಿರುವ ಅಪರೂಪದ ಘಟನೆಯೊಂದು ನಡೆದಿದೆ.
ಛತ್ತೀಸ್‌ಗಢ್‌ನಲ್ಲೊಬ್ಬ ಯುವಕ ಇಂತಹ ದುಸ್ಸಾಹಸವನ್ನು ಮಾಡಿದ್ದಾನೆ. ಛತ್ತೀಸ್‌ಗಢ್‌ನ ಬಲರಾಮಪುರದ ದುರ್ಗೇಶ್ ಪಾಂಡೆಎಂಬಾತ ತನ್ನ ಬೆರಳನ್ನು ಬಿಜೆಪಿಯ ಗೆಲುವಿಗಾಗಿ ಕಾಳಿ ದೇವಿಗೆ ಅರ್ಪಣೆ ಮಾಡಿದ್ದಾನೆ.